This page has been fully proofread once and needs a second look.

ನಾರಾಯಣಾಶ್ರಮದಲ್ಲಿ ವ್ಯಾಸಮುಷ್ಟಿಗಳನ್ನು ಸ್ವೀಕರಿಸಿದ್ದು
 

 
ಮರಳಿ ಆ ಮಧ್ವಮುನಿ ಬಡಗ ಬದರಿಗೆ ತೆರಳಿ

ಶ್ರೀ ವೇದವ್ಯಾಸರ ದರುಶನವ ಮಾಡುತ್ತ

ವ್ಯಾಸಮುಷ್ಟಿಗಳೆಂಬ ಪ್ರತಿಮೆಗಳ ಪಡೆದರು

ಈ ವ್ಯಾಸಮುಷ್ಟಿಗಳ ಮಹಿಮೆ ಅಪ್ರತಿಮ

ಲಕುಮಿ ನಾರಾಯಣರು ಇವುಗಳಲ್ಲಿ ಸನ್ನಿಹಿತ

ಶ್ರೇಷ್ಠ ದಿವಿಜರು ಮಾತ್ರ ಪಡೆಯಬಲ್ಲರು ಇವನು
 
॥ ೨೪ ॥
 
ಭಾರತ ತಾತ್ಪರ್ಯ ನಿರ್ಣಯವನ್ನು ರಚಿಸಲು ವೇದವ್ಯಾಸರ ಆದೇಶ
 

 
ಎಲ್ಲವನೂ ಬಲ್ಲವರು ಶ್ರೀ ವೇದ ವ್ಯಾಸರು

ಪರಮಾರ್ಥ ಜ್ಞಾನಕ್ಕೆ ಮಧ್ವರು ಸಮರ್ಥರು

ಎಂದೆಣಿಸಿ ಪರಮಗುರು ವ್ಯಾಸದೇವರು ಅಂದು

ಆಣತಿಯ ನೀಡಿದರು ಆನಂದ ತೀರ್ಥರಿಗೆ

ಭಾರತ ತಾತ್ಪರ್ಯ ನಿರ್ಣಯವ ರಚಿಸಿರಿ

ಪರತತ್ವ ಖ್ಯಾತಿಗೆ ಕಾರಣರು ನೀವಾಗಿ
 
॥ ೨೫ ॥
 
ಮರಳಿ ಗಂಗೆಯನ್ನು ದಾಟಿದ ಮಹಿಮ
 

 
ಸಕಲ ತೀರ್ಥಗಳಲ್ಲೂ ಶ್ರೀ ಹರಿಯ ರೂಪ

ಸಕಲ ಕ್ಷೇತ್ರಗಳಲ್ಲಿ ಪರಮಾತ್ಮ ಸನ್ನಿಹಿತ

ಇಂತೆಣಿಸಿ ಆ ಮಹಿಮ ಆನಂದ ತೀರ್ಥರು

ಸಕಲ ತೀರ್ಥದಿ ಮಿಂದು ಸಕಲಕ್ಷೇತ್ರದಿ ಭಜಿಸಿ
 

ಗಂಗಾ ತರಂಗಗಳ ತುಂಗ ಮಾಲೆಯ ಕಂಡು

ಅನುಚರರ ಒಡಗೂಡಿ ತೀರವನು ಸೇರಿದರು
 
॥ ೨೬ ॥
 
ಹಿಂದೊಮ್ಮೆ ನಡೆದಂತೆ ಮತ್ತೊಮ್ಮೆ ನಡೆಯಿತು

ಗಂಗೆಯ ತೀರದಲ್ಲಿ ನಾವೆಗಳೇ ಇಲ್ಲ

ಸಂಧ್ಯೆಯ ಸೂರ್ಯನು ಅಸ್ತಮಿಸುತಿರಲು

ಮುಂದೇನು ಗತಿ ಎಂದು ವಿಹ್ವಲರು ಶಿಷ್ಯರು

ಶಿಷ್ಯರಾ ಚಿಂತೆಯನು ಮನಗಂಡು ಮಧ್ವರು

ದಾಟಿದರು ಗಂಗೆಯನು ಉಟ್ಟ ಬಟ್ಟೆಯಲೆ
 
ಹತ್ತನೆಯ ಸರ್ಗ / 163
 
24
 
25
 
26
 
27
 
॥ ೨೭ ॥