This page has been fully proofread once and needs a second look.

ಅನೇಕ ತೆರನಾದ ಚೋರರನ್ನು ಜಯಿಸಿದ್ದು

 
ಮತ್ತೊಮ್ಮೆ ಚೋರರ ಗುಂಪೊಂದು ಬಂದು

ಮಧ್ವರ ಶಿಷ್ಯರಿಗೆ ಕಿರುಕುಳವ ನೀಡಿದರು

ಆಗಲಾ ಮಧ್ವಮುನಿ ಗಂಟೊಂದ ಹಿಡಿದು

ಅದರೊಳಗೆ ಹಣವಿರುವ ಭ್ರಾಂತಿಯನ್ನು ಹುಟ್ಟಿಸಿ

ಸಂಪ್ತಕರ ಸಂಗ ಪಾರ್ಥ ಮಾಡಿದ ತೆರದಿ

ಚೋರರೆಲ್ಲರ ನಡುವೆ ಕಲಹವೇರ್ಪಡಿಸಿದರು
 
॥ ೨೦ ॥
 
ಇನ್ನೊಮ್ಮೆ ಮಧ್ವರನು ಹತ್ಯೆಗೈಯಲು ಎಣಿಸಿ

ಶೂರರೆಂದೆನಿಸಿದ್ದ ನೂರಾರು ಚೋರರು

ಒಮ್ಮೆಲೇ ನುಗ್ಗಿದರು ಪರಿವಾರದೆಡೆಗೆ
 

ಎದೆಗುಂದಿ ಕಂಗೆಡದ ಆನಂದ ತೀರ್ಥರು

ಶಿಷ್ಯನೊಬ್ಬನ ಕರೆದು ಕೊಡಲಿಯೊಂದನು ನೀಡಿ

ಕಳ್ಳರನು ಬಡಿದಟ್ಟಿ ಹಿಮ್ಮೆಟ್ಟಿಸಿದರು.
 
॥ ೨೧ ॥
 
ಮತ್ತೊಂದು ಸ್ಥಳದಲ್ಲಿ ಮತ್ತೊಂದು ಬಾರಿ

ಮಧ್ವ ಪರಿವಾರವನು ಸಂಧಿಸಿದ ಚೋರರಿಗೆ

ಶಿಲೆಯ ಪ್ರತಿಮೆಗಳಂತೆ ಮಧ್ವಗಣ ಕಂಡಿತು

ಇದರಿಂದ ಖತಿಗೊಂಡು ಮುನ್ನಡೆದ ಚೋರರು

ಹಿಂದಿರುಗಿ ನೋಡಿದರೆ ಮತ್ತೆ ಮನುಜರೆ ಅವರು!

ಮಧ್ವಮಹಿಮೆಯ ಕಂಡು ಉದ್ದಂಡ ನಮಿಸಿದರು
 
॥ ೨೨ ॥
 
ಶ್ರೀ ಸತ್ಯತೀರ್ಥರ ರಕ್ಷಣೆ
 

 
ಮಧ್ವಮುನಿಗಳ ಶಿಷ್ಯ ಶ್ರೀ ಸತ್ಯತೀರ್ಥರು

ಹಿಮಗಿರಿಯ ಪ್ರಾಂತದಲ್ಲಿ ಸಂಚರಿಸುತಿರಲು

ದೈತ್ಯನೊಬ್ಬನು ಬಂದು ವ್ಯಾಘ್ರರೂಪದಿ ನಿಂತು

ಸತ್ಯತೀರ್ಥರ ಹತ್ಯೆಗೈಯಲೆತ್ನಿಸಿದ

ಇದ ಕಂಡು ಮಧ್ವಮುನಿ ಬಹು ಕೃದ್ಧಗೊಂಡು

ಹಸ್ತತಾಡನದಿಂದ ದೈತ್ಯನನು ವಧಿಸಿದರು
 
162 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥