This page has been fully proofread once and needs a second look.

ಗರುಡ ಮಂತ್ರವ ಬಲ್ಲ ಶ್ರೇಷ್ಠ ಮಾನವನೊಬ್ಬ

ಮಂತ್ರದಲ್ಲಿ ಹಾವುಗಳ ಸೆರೆ ಹಿಡಿವ ಹಾಗೆ

ಬಿರುನುಡಿಯ ಬಲದಿಂದ ಆನಂದ ತೀರ್ಥರು

ತಡೆಹಿಡಿದು ನಿಲಿಸಿದರು ತುರುಕ ಭಟರನ್ನು

ಮರಣ ಭಯವೆಂಬುವ ನದಿಯನ್ನೇ ಅಲ್ಲದೆ
 

ದೇವನದಿಯನು ಕೂಡ ಪರಿಜನರು ದಾಟಿದರು
 
॥ ೧೨ ॥
 
ತುರುಕ ಕಿಂಕರ ಸಂಖ್ಯೆ ಸಾವಿರದಲಿಹುದು

ಆದರೂ ಮಧ್ವಮುನಿ ನಿರ್ವಿಕಾರರು ಅಹುದು

ಜಗವೆಲ್ಲ ಸಲಹುವ ಮಾರುತನ ಅವತಾರ

ಕ್ರೂರ ಕಿಂಕರರ ಭಯ ಅವರಿಗೇಕೆ ?

ನರಿಗಳ ಗುಂಪಿನಲಿ ಕೇಸರಿಯು ಇರುವಂತೆ

ಕಂಗೊಳಿಸಿ ಮೆರೆದರು ಆನಂದ ತೀರ್ಥರು
 
॥ ೧೩ ॥
 
ತುರುಕ ರಾಜನು ತನ್ನ ಸೌಧ ಶಿಖರದಿ ನಿಂತು

ತನ್ನ ನಗರಿಯ ಹೊಕ್ಕ ಆನಂದ ತೀರ್ಥರನು

ಎವೆ ಇಕ್ಕದೇ ನೋಡಿ ಆಶ್ಚರ್ಯಗೊಂಡನು

ಏನಿವರ ಸೌಷ್ಠವ ! ಏನಿದೀ ಮೈಮಾಟ !

ದೇವ ದಾನವರಿಂದ ನಡುಗಿಸಲಸಾಧ್ಯ !

ಆ ನೃಪತಿ ಮಧ್ವರನು ಕುರಿತು ಇಂತಂದನು
 
ತೆಂದನು ॥ ೧೪ ॥
 
"ಹಾದಿಹೋಕರು ಎಲ್ಲ ಬೇಹುಗಾರರು ಎಂಬ

ಶಂಕೆಯಿಂದಲಿ ನಮ್ಮ ರಾಜ ಭಟರೆಲ್ಲ

ಪಥಿಕರಿಗೆ ಕಿರುಕುಳವ ಕೊಡುತಲಿರಬಹುದು

ಪಥಿಕ ಪಾಟನ ಕರ್ಮ ದೀಕ್ಷಿತರು ಅವರಹುದು

ಕಾಲದೂತರ ತರಹ ಕರುಣೆಯೇ ಇರದವರು

ಅವರಿಂದ ಪಾರಾಗಿ ಹೇಗೆ ಬಂದಿರಿ ತಾವು ?
 
M
 
160 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥