This page has not been fully proofread.

ಶಿಷ್ಯರನ್ನು ಗಂಗಾನದಿ ದಾಟಿಸಿದ್ದು : ತುರುಷ್ಕರಾಜನ ವಿಸ್ಮಯ
 
ವೈಷ್ಣವಾಗ್ರೇಸರರು ಆನಂದ ತೀರ್ಥರು
 
ಜ್ಞಾನ ಪ್ರಪೂರ್ಣರು ಶಿಷ್ಯರಿಗೆ ಅತಿ ಪ್ರಿಯರು
ಬಡಗ ದಿಕ್ಕಿನ ಕಡೆಗೆ ಮತ್ತೊಮ್ಮೆ ಪಯಣಿಸುತ
ಶಿಷ್ಯರಿಂದೊಡಗೂಡಿ ಗಂಗೆಯೆಡೆ ನಡೆದರು
ಶತ್ರುಭಯದಿಂದಾಗಿ ಅಂಬಿಗರ ಸುಳಿವಿಲ್ಲ
ಗಂಗೆಯನು ದಾಟಲು ನಾವೆಗಳೇ ಇಲ್ಲ
 
ಪರಮ ಕರುಣಾಳುಗಳು ಆನಂದ ತೀರ್ಥರು
ಶಿಷ್ಯರಿಗೆ ಆಶ್ರಯವ ಮೂಲದಲಿ ನೀಡುವರು
ಇಂದವರು ಸಿಲುಕಿರುವ ಸಂದಿಗ್ಧವನು ಅರಿತು
ಎಲ್ಲರಿಗೂ ಅಭಯವನು ನೀಡಿ ಹುರಿದುಂಬಿಸಿ
ಸಂಸಾರ ಸಾಗರವ ದಾಟಿಹರೋ ಎಂಬಂತೆ
ಶಿಷ್ಯರೊಂದಿಗೆ ತುಂಬು ಗಂಗೆಯನ್ನು ಹಾಯ್ದರು
 
1
 
ಕೂಗೊಂದು ಕೇಳಿಸಿತು ತಡೆಯಿರಿ ! ತಡೆಯಿರಿ!
ತೀರ ಸೇರುವ ಮುನ್ನ ವೈರಿಗಳ ಕೊಲ್ಲಿರಿ'
ಅಲ್ಲಿದ್ದ ತ್ವರಕ ಭಟರಿಂತೆಂದು ಕೂಗುತ್ತ
ಹರಿಹಾಯ್ದು ಬಂದರು ಮಧ್ವಸಜ್ಜನರೆಡೆಗೆ
ತುರುಕ ಪುರುಷರ ಇಂಥ ಸೊಕ್ಕನ್ನು ಲೆಕ್ಕಿಸದೆ
ಅವರ ತಾಯ್ತುಡಿಯಲ್ಲೇ ಮಧ್ವರಿಂತೆಂದರು
 
"ಮಂದಮತಿಗಳು ನೀವು ಶುದ್ಧ ಅವಿವೇಕಿಗಳು
ಹುಚ್ಚುತನದಲಿ ನೀವು ನೀರಿನಲ್ಲಿ ಕೊಚ್ಚದಿರಿ
ಹೆಚ್ಚು ಸಂಖ್ಯೆಯ ನಿಮಗೆ ನಮ್ಮಿಂದ ಭಯವೆ ?
ನಿಮ್ಮರಸನರಸಿಯೇ ನಾವು ಬಂದಿಹೆವಿಂದು
ಇಂತಿರಲು ನಮ್ಮೊಡನೆ ನಿಮಗೇಕೆ ಕಲಹ ? "
ಇಂತೆಂದು ತ್ವರಕರನು ಸಂಭ್ರಾಂತಿಗೊಳಿಸಿದರು
 
ಹತ್ತನೆಯ ಸರ್ಗ / 159
 
8
 
9
 
10
 
11