This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮ:
 

 
ತ್ತನೆಯ ಸರ್ಗ
 

 
ದ್ವಿತೀಯ ಬದರೀಯಾತ್ರೆಯಲ್ಲಿ ನಡೆದ ಮಹಿಮೆಗಳು
 

 
ಮಾಧವನ ಗುಣಗಳನ್ನು ಸಾಧಿಸುವ ಮಹಿಮ

ಪಾಪದ ಪಥಿಕರಿಗೆ ತಾಪವನು ನೀಡುವ

ಚೈತ್ರ ವೈಶಾಖದಲಿ ಕುಸುಮಗಳ ಸೃಜಿಸುವ

ಮಧ್ವಮುನಿಯೆಂಬುವ ಆ ಪ್ರಖರ ಸೂರ್ಯರು
ಭೈ

ಭೃ
ಗು ಕುಲೋತ್ತುಂಗರ ಆ ದಿವ್ಯ ಕ್ಷೇತ್ರದಲ್ಲಿ
ಲಿ
ಸಕಲ ಸಂಭ್ರಮದಿಂದ ವಿಜೃಂಭಿಸಿದರು
 
॥ ೧ ॥
 
ಆನಂದ ತೀರ್ಥರ ಶಿಷ್ಯರಲ್ಲೊಬ್ಬಾತ

ಆಸಕ್ತಿಯಲಿ ಕುಳಿತ ಶೋಶ್ರೋತೃನಿವಹವ ಕುರಿತು

ವಿವಿಧ ಸುವೃತ್ತಗಳು ವಿವಿಧ ಛಂದಗಳಿರುವ

ಖಂಡಕಾವ್ಯದಲ್ಲಿರುವ ನಾಯಕನ ಸ್ತುತಿಯಂತೆ

ಗುರುಮಧ್ವ ಸ್ತುತಿಯನ್ನು ಪಠಿಸತೊಡಗಿದನು

ಆನಂದ ತೀರ್ಥರ ಚರಿತೆಯನು ಪೊಗಳಿದನು
 
॥ ೨ ॥
 
"ಮಧ್ವಮುನಿಗಳ ಚರಿತೆ ಉತ್ಕೃಷ್ಟ ಗೀತೆ

ಸಕಲ ಭುವನಗಳಲ್ಲಿ ಇದಕೆ ಸರಿಸಮನಿಲ್ಲ

ಸುರರ ಆಯುಷ್ಯದಲೂ ಮುಗಿಸಲಾಗದು ಅದನು

ಆದರೂ ಪ್ಶ್ರೋತೃಗಳೆ ! ಕೇಳ ಬಯಸಿಹಿರಿ

ಅಷ್ಟಿಷ್ಟು ಅಲ್ಲಲ್ಲಿ ಹೇಳಿ ಮುಗಿಸುವೆನು

ಎಂದಿಗೂ ಮುಗಿಯದ ಮಧ್ವ ಚರಿತೆಯನು
 
1
 
2
 
3
 
॥ ೩ ॥