This page has been fully proofread once and needs a second look.

ದ್ವಿತೀಯ ಬದರಿಯಾತ್ರೆ; ರಜತಪೀಠಕ್ಕೆ ಮರಳಿದುದು
 

 
ಆನಂದ ತೀರ್ಥರದು ಅತಿ ಮಧುರ ಚರಿತೆ

ಹೃದಯ ವೈಶಾಲ್ಯತೆಗೆ ಪರಿಧಿಗಳೇ ಇಲ್ಲ

ಅವರು ನಡೆಸಿದ ಕಾರ್ಯ ಅತ್ಯಂತ ಶ್ರೇಷ್ಠ

ಅವರ ನುಡಿ, ವಚನಗಳು ಅತ್ಯಮೂಲ್ಯ

ಅವರ ಸಾಧನೆಯಹುದು ವಿಶ್ವವಿಸ್ಮಯಜನಿತ

ಎಂತಹ ಅದ್ಭುತ! ಎಂತಹ ಅಚ್ಚರಿ!
॥ ೫೨ ॥
 
ಚೈತನ್ಯ ಜಗಕೆಲ್ಲ ಚೇತನವ ನೀಡುವ

ಪುಣ್ಯನದಿ, ತೀರ್ಥಗಳ ಹಲವಾರು ದಾಟಿ

ಸಹ್ಯಾದ್ರಿ ವಿಂಧ್ಯಾದ್ರಿ ಶಿಖರಗಳನೇರಿ

ಶ್ರೀ ವ್ಯಾಸದೇವರಿಗೆ ಅತ್ಯಂತ ಪ್ರಿಯವಾದ

ಬದರಿಕಾಶ್ರಮವನ್ನು ಮಧ್ವಮುನಿ ಸೇರಿದರು

ಉತ್ತಮೋತ್ತಮವಾದ ಸನ್ಯಾಸ ಪಡೆದಂತೆ
 
॥ ೫೩ ॥
 
ಮಧ್ವ ಮುನಿ ರಚಿಸಿರುವ ಸೂತ್ರ ಭಾಷ್ಯವ ಕಂಡು

ಅತಿಯಾಗಿ ಮುದಗೊಂಡ ಶ್ರೀ ವ್ಯಾಸದೇವರು

ಈ ಹಿಂದೆ ತ್ರೇತೆಯಲ್ಲಿ ಹನುಮನಿಗೆ ನೀಡಿದ್ದ

ಸಹಭೋಗವೆಂಬುವ ಬ್ರಹ್ಮ ಪದವಿಯ ಕೊಟ್ಟು

ಆದರವ ತೋರಿದರು ಆನಂದ ತೀರ್ಥರಿಗೆ

ಬೇರಾರಿಗುಂಟು ಇಂತಹ ಪುಣ್ಯ?
 
॥ ೫೪ ॥
 
ಇಂತು ಮತ್ತೊಮ್ಮೆ ಆ ಆನಂದ ತೀರ್ಥರು

ಬದರಿಕಾಶ್ರಮದಲ್ಲಿ ಕಾರ್ಯಗಳ ಪೂರೈಸಿ

ಗುರು ಸಾರ್ವಭೌಮರಿಗೆ ಮತ್ತೊಮ್ಮೆ ನಮಿಸುತ್ತ

ಅವರ ಆದೇಶವನು ಶಿರದಲ್ಲಿ ಧರಿಸುತ್ತ

ಪರಿವಾರ ಜನರೊಡನೆ ಮರಳಿದರು ಉಡುಪಿಗೆ

ಆನಂದದಿಂದವರು ಶ್ರೀ ಹರಿಗೆ ನಮಿಸಿದರು
 
52
 
53
 
54
 
55
 
॥ ೫೫ ॥
 
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ

ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಒಂಭತ್ತನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.
 
154 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ