This page has been fully proofread once and needs a second look.

ಸಂಭ್ರಮದಿ ಜರುಗಿತು, ವಾಸುದೇವರ ಯಜ್ಞ

ನೂರಾರು ಹವ್ಯಕರು, ಹಲವಾರು ಋತ್ವಿಕರು

ಆನಂದ ತೀರ್ಥರ ಅನುಜರೇ ಹೋತೃಗಳು

ಅನುವಾಕ್ಯ ಯಾಜ್ಞೆಯೆಗಳು, ಪ್ರವರ್ಗ್ಯ ಅಭಿಷ್ಟವಗಳು

ಎಲ್ಲವೂ ಮೇಳವಿಸಿ ವಿಜೃಂಭಿಸಿತ್ತು

ಸುರರೆಲ್ಲ ಇದ ಕಂಡು ಮುದವ ತಾಳಿದರು
 
॥ ೪೮ ॥
 
ಮಧ್ವರ ಅನುಜರು ಅತಿಶಯದ ಪರಿಣತರು

ವೀರಶ್ರೇಷ್ಠನ ತರದಿ ವೈಶ್ವದೇವರ ಕರೆದು

ಹಲವಾರು ಮಂತ್ರಗಳ, ಶಸ್ತ್ರಗಳ ಬಳಸಿ

ಯಜ್ಞಕ್ಕೆ ವಿಘ್ನವನು ತರುವ ಅಸುರರ ತಡೆದು

ಸುರಗಣಕೆ ನೀಡಿದರು ಹವಿರ್ಭಾಗವನ್ನು

ವಾಸುದೇವರ ಯಜ್ಞ ಸಾಫಲ್ಯ ಪಡೆಯಿತು
 
॥ ೪೯ ॥
 
ದೇವತೆಗಳೆಲ್ಲರಲಿ ವಾಯುದೇವರೆ ಶ್ರೇಷ್ಠ

ಸೋಮರಸಪಾನವನು ಮೂರು ಸಲ ಮಾಳವರು
 
ಳ್ದವರು
ಆನಂದತೀರ್ಥರು ವಾಯುವಿನ ಅವತಾರ

ಅಂತಹ ಮಹನೀಯ ಪ್ರಕೃಭೃತಿಗಳು

ಮಹಾಕ್ರತುವೆಂಬುವ ಯಜ್ಞನೇತಾರರು

ಇಂತಿರಲು ಆ ಯಜ್ಞ ಬಣ್ಣನೆಗೆ ನಿಲುಕುವುದೆ ?
 
॥ ೫೦ ॥
 
ಬ್ರಹ್ಮನ ಜ್ಞಾನವನ್ನು ಅರಸಿ ಹೊರಟವರಿಗೆ

ಕರ್ಮವೇ ಸಾಧನವು ಅದರ ಸಂಪಾದನೆಗೆ

ಬ್ರಹ್ಮ ಜ್ಞಾನದ ಬಗ್ಗೆ ಅಧಿಕಾರ ಉಳ್ಳವಗೆ

ಅರಿವನ್ನು ಮೂಡಿಸಲು ಮಧ್ವಮುನಿ ಜನಿಸಿದರು

ಯಜ್ಞಾದಿ ಕರ್ಮಗಳೂ ಪರಮಾತ್ಮ ವಿಷಯವೇ
;
ಅದರಿಂದಲೇ ಅವರು ಇವುಗಳಲೂ ತೊಡಗಿದರು
 
ಒಂಬತ್ತನೆಯ ಸರ್ಗ / 153
 
48
 
49
 
50
 
51
 
॥ ೫೧ ॥