This page has been fully proofread once and needs a second look.

ಈ ಪರಿಯೊಳಾ ಪೂಜ್ಯ ಆನಂದ ತೀರ್ಥರು

ರೂಪ್ಯ ಪೀಠಾಪುರದಿ ವಾಸಿಸಲು ತೊಡಗಿದರು

ಯಾವ ಬಗೆ ಆಶ್ರಯವೂ ಇಲ್ಲದ ಸಜ್ಜನಕೆ
 

ಮುಕುತಿ ಮಾರ್ಗಕೆ ದಾರಿ ತೋರಬೇಕೆಂದೆನಿಸಿ
 

ಏನಾದರೂ ಸತ್ಕೃತಿಯ ಮಾಡಲೆಳಸಿದರು.

ನಿರ್ವ್ಯಾಜ ಪ್ರೇಮವನು ಜನಕೆ ತೋರಿದರು
 
॥ ೪೦ ॥
 
ಉಡುಪಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆ
 

 
ಗೋಪಿಕಾಸ್ತ್ರೀಯರ ಚಿತ್ದೊಲ್ಲಭನಾದ

ಶ್ರೀ ಲಕುಮಿಪತಿಯಾದ ಶ್ರೀ ಕೃಷ್ಣ ಪ್ರತಿಮೆಯನು

ಪರಿಶುದ್ಧ ಜಲದಿಂದ ತುಂಬಿ ತುಳುಕುತ್ತಿದ್ದ

ಮಧ್ವಮುನಿ ನಾಮದ ಕಲ್ಯಾಣಿಯಲ್ಲಿ
ಮೂಾ

ಮೂರ್ನಾ
ಲ್ಕು ಶಿಷ್ಯರ ನೆರವಿನಲಿ ತೊಳೆದು

ಅಭಿಷೇಕ ಮಾಡಿದರು ಆ ಸರೋವರದಿ
 
॥ ೪೧ ॥
 
ಆ ಪ್ರತಿಮೆಯೇನು ಸಾಮಾನ್ಯವಲ್ಲ

ಮೂವತ್ತು ಬಲಶಾಲಿ ಜನರದನು ಹೊರರು

ಇಂತಹ ಪ್ರತಿಮೆಯನು ಪೂಜ್ಯ ಆಚಾರ್ಯರು

ಸುಲಭದಲಿ ಎತ್ತುತ್ತ ಮಠಕೆ ಕೊಂಡೊಯ್ದರು

ಶ್ರೀ ಹರಿಯ ಸಾನ್ನಿಧ್ಯ ಪ್ರತಿಮೆಯೊಳಗಿತ್ತು

ಆಚಾರ್ಯ ಸ್ಪರ್ಶವದ ಪಾವನವ ಮಾಡಿತ್ತು.
 
॥ ೪೨ ॥
 
ನಂದನಂದನನಾದ ಆ ಕೃಷ್ಣಮೂರ್ತಿ

ಮೃದು ಮಂದಹಾಸದ ಸುಂದರಾನನ ಮೂರ್ತಿ

ಪ್ರಾಕೃತದ ಇಂದ್ರಿಯಕೆ ಗೋಚರಿಸನವನು

ರಮಣೀಯ ಸುಂದರನು, ಬ್ರಹ್ಮಾಂಡ ಪೂಜಿತನು

ಆ ದಿವ್ಯ ಮೂರ್ತಿಯನ್ನು ಆನಂದ ತೀರ್ಥರು

ವಿಹಿತದಲ್ಲಿ ಪ್ರತಿಮೆಯಲ್ಲಿ ಸನ್ನಿಹಿತಗೊಳಿಸಿದರು
 
ಒಂಬತ್ತನೆಯ ಸರ್ಗ / 151
 
40
 
41
 
42
 
43
 
॥ ೪೩ ॥