This page has not been fully proofread.

ಅಚ್ಯುತ ಪ್ರೇಕ್ಷರ ಅಚ್ಚು ಮೆಚ್ಚಿನ ಶಿಷ್ಯ
ಆನಂದ ತೀರ್ಥರ ಶಾಸ್ತ್ರರಸ ತೀರ್ಥವನ್ನು
ಆಸ್ವಾದಿಸುತ ನಲಿದ ಗುರುವ ಪರಿಶುಭ್ರ ಮನ
ಅಕಲಂಕ ಚಂದ್ರಮನ ಮಂಡಲದ ಪರಿಯಲ್ಲಿ
ಅರಳಿರುವ ತಾವರೆಯ ಹೂವಿನ ಪರಿಯಲ್ಲಿ
 
ಶೋಭಿಸಿತು ಶಾರದನ ವಾರಿಧಿಯ ಜಲದಂತೆ
 
ಮನದಾಳದಲ್ಲಿಳಿದ ಅದೈತ ಸಿದ್ಧಾಂತ
ಅಚ್ಯುತ ಪ್ರೇಕ್ಷರನು ಅಚಲರಾಗಿರಿಸಿತ್ತು
ಬಾಯಾರಿದವನೊಬ್ಬ ಉಪ್ಪು ನೀರನು ಕುಡಿದು
ಬಳಿಕ ಸಿಹಿನೀರನ್ನು ಕುಡಿದು ನಲಿಯುವ ಹಾಗೆ
ಮಧ್ವ ಶಾಸ್ತ್ರದ ಶ್ರವಣ ಆ ಗುರುವ ಮನದಲ್ಲಿ
ಆಪ್ಯಾಯಕರವಾದ ಆನಂದ ತಂದಿತು
 
ನಂತರದ ಕಥೆಯಂತೂ ತುಂಬ ಸ್ವಾ
 
ಸ್ವಾರಸ್ಯ
 
ಅಚ್ಯುತ ಪ್ರೇಕ್ಷರೂ ಜೇಷ್ಠಯತಿಗಳೂ ಕೂಡಿ
ಮಧ್ವ ಮುನಿಯೆಂಬುವ ವಿಷ್ಣು ಪದವಾಶ್ರಯಿಸಿ
ಮಧ್ವಶಾಸ್ತ್ರದ ತಿರುಳ ಎಲ್ಲೆಲ್ಲೂ ಹರಡಿ
ಬಾನಿನಲಿ ರವಿ ಚಂದ್ರ ಕೂಡಿ ಬೆಳಗುವ ಹಾಗೆ
ನೀಗಿದರು ಜನಮನದಿ ಕವಿದ ಕತ್ತಲೆಯ
 
ಮಧ್ವಮತ ಪಾಲಿಸಲು ಯೋಗ್ಯತೆಯು ಬೇಕು
ದುಷ್ಟ, ದುರ್ಜನಕೆಲ್ಲ ಮಧ್ವಮತ ಸಲ್ಲ
ಮಧ್ವಾನುಯಾಯಿಗಳ ಕುರುಹುಗಳು ಏನು ?
ತಪ್ತ ಮುದ್ರೆಯ ಧರಿಸಿ ಬೀಗುವನೇ ಮಾಧ್ವ
ಸಕಲ ದುರಿತವ ಕಳೆವ ಶಂಖ ಚಕ್ರಾಂಕಿತವ
ಮಧ್ವಮುನಿ ನೀಡಿದರು ತಮ್ಮೆಲ್ಲ ಶಿಷ್ಯರಿಗೆ
 
150 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39