This page has been fully proofread once and needs a second look.

ಮಧ್ವಮುನಿ ಎಂಬುವ ಸಾಗರದ ನೆಲೆಯಲ್ಲಿ

ಬ್ರಹ್ಮಸೂತ್ರದ ಭಾಷ್ಯ ಅಮೃತದ ಜಲದಂತೆ

ಜೇಷ್ಠಯತಿಯೆಂಬುವ ಮುಗಿಲೊಂದು ಬಂದು

ಈ ಜಲವ ತನ್ನೊಳಗೆ ಸಾಂದ್ರವಾಗಿಸಿಕೊಂಡು

ಶಿಷ್ಯಜನರೆಂಬುವ ಧರೆಗೆ ಉಣಿಸಿದರು

ಮುಗಿಲಿನ ಜಲನಿಧಿಯು ಮತ್ತಷ್ಟು ಮಿಗಿಲಾಯ್ತು
 
॥ ೩೨ ॥
 
ಅಚ್ಯುತಪ್ರೇಕ್ಷರು ಶ್ರೇಷ್ಠ ಸುವಿಚಾರಿಗಳು

ಕಲಿಕಾಲ ಬಲದಿಂದ ಅದೈತಿಯಾದವರು

ಆನಂದ ತೀರ್ಥರು ಅನುನೀತಿ ರಥರು

ಸುವಿಚಾರಧಾರೆ, ವಿನಯೋಕ್ತಿಯಿಂದ

ಶಾಸ್ತ್ರ ಸಮ್ಮತವಾದ ತರ್ಕ ಚತುರತೆಯಿಂದ

ಸೂತ್ರಭಾಷ್ಯದ ಹಿರಿಮೆ ಗುರುಗಳಿಗೆ ಹೇಳಿದರು
 
॥ ೩೩ ॥
 
ಅಚ್ಯುತ ಪ್ರೇಕ್ಷರು ಅಚಲ ಸಿದ್ಧಾಂತಿಗಳು
ಅದೈ

ಅದ್ವೈ
ತ ಬಿಳಲುಗಳಲಿ ಬಂಧವಾಗಿದ್ದವರು

ಆನಂದ ತೀರ್ಥರು ಗೊಂದಲವ ನೀಗುತ್ತ

ಸೂತ್ರಗಳ ಅರ್ಥವನ್ನು ವಿವರದಲಿ ಹೇಳುತ್ತ

ರೋಗಿಗಳ ವ್ಯಾಧಿಯನ್ನು ವೈದ್ಯ ಗುರುತಿಸುವಂತೆ
 

ಗುರುಮನದ ಸಂಶಯವ ಕೀಳ ತೊಡಗಿದರು
 
॥ ೩೪ ॥
 
ಮಾನಸ ಸರೋವರದಿ ಕಾಗೆ ಕುಳಿತಾಗ
 

ಅದನು ಓಡಿಸಲೊಂದು ಹಂಸಪಕ್ಷಿಯು ಬಂದು

ರೆಕ್ಕೆಗಳನಪ್ಪಳಿಸಿ ಭೀಕರದಿ ಚೀತ್ಕರಿಸಿ

ಅಂಜಿದಾ ಕಾಗೆಯನು ಓಡಿಸುವ ಪರಿಯಲ್ಲಿ

ಮಧ್ವಮುನಿಗಳು ತಮ್ಮ ಬುದ್ಧಿ ಸಾಮರ್ಥ್ಯದಲ್ಲಿ
ಲಿ
ಗುರುಮನದ ಕಲ್ಮಷವ ಕಿತ್ತೆಸೆದರು
 
ಒಂಬತ್ತನೆಯ ಸರ್ಗ / 149
 
32
 
33
 
34
 
35
 
॥ ೩೫ ॥