This page has not been fully proofread.

ಧನಕನಕ ವಸ್ತುಗಳ ಹಂಬಲವ ಪಡೆದಿರುವ

ಮಧ್ವ ಸಿದ್ದಾಂಧಾಂತದ ಕೋವಿದರು ಉಂಟು

ಮಧ್ವ ಶಾಸ್ತ್ರದೊಳಿರುವ ತಿರುಳನ್ನು ಅರಿಯದೆಯೆ

ಇಹಸುಖವ ಮಾತ್ರವೇ ಬಯಸುವ ಈ ಮಂದಿ

ಬಲಮುರಿಯ ಶಂಖವನು ಮಾರಾಟ ಮಾಡಿ
 

ಧನವನ್ನು ಗಳಿಸಿದ ಬಲ್ಲಿದನ ಪರಿ ಇಹರು
 
॥ ೨೪ ॥
 
ಪರಮಾತ್ಮ ಸೃಷ್ಟಿಯಲಿ ಬಲಮುರಿಯು ಶ್ರೇಷ್ಠ

ಮಾನವನ ಉನ್ನತಿಗೆ ಸಹಕಾರಿಯಾಗಿಹುದು

ರಾಜ್ಯಾಧಿಪತಿಯೊಬ್ಬ ಇಂಥ ಶಂಖವ ಕೊಂಡು

ಪರಿಪರಿಯ ವಿಧದಲ್ಲಿ ಅದನು ಪೂಜಿಸುತ

ಸಕಲ ಸಿರಿ ಸಂಪದಕ್ಕೆ ಅಧಿಕಾರಿಯಾದ

ವಾಹ್ಮನಕೆ ಮೀರಿದುದು ಬಲಮುರಿಯ ಮಹಿಮೆ
 
॥ ೨೫ ॥
 
ಮಧ್ವಮುನಿ ರೂಪಿಸಿದ ಮಧ್ವಸಿದ್ಧಾಂತಗಳು

ಶಾಸ್ತ್ರಗಳ ಕಲ್ಪತರು ಎಂಬ ಹೆಸರಲ್ಲಿ ಮಾನ್ಯ

ಮಧ್ವ ಸಿದ್ಧಾಂತಗಳ ಶ್ರವಣ ಮನನಗಳಿಂದ

ಆ ನರಪತಿಯ ತೆರದಲ್ಲಿ ಜನಮಾನ್ಯರಾಗುವರು

ಮಧ್ವಶಾಸ್ತ್ರದ ಮಹಿಮೆ ಏನೆಂದು ಪೊಗಳಲಿ ?

ಇಂತು ಆ ಶೋಭನರು ಜನಕೆ ಮುದ ನೀಡಿದರು
 
॥ ೨೬ ॥
 
ಈ ಪರಿಯೊಳಾ ಪೂಜ್ಯ ಆನಂದ ತೀರ್ಥರು

ತಮ್ಮ ಸಿದ್ಧಾಂತಗಳ ಸಜ್ಜನಕೆ ಬೋಧಿಸುತ

ಗಳಿಸಿದರು ಶೀಘ್ರದಲ್ಲಿ ಶಿಷ್ಯ ಕೋಟಿಯನು

ಶೋಭನಾಚಾರ್ಯರು ಈ ಶಿಷ್ಯರಲ್ಲಿ ಪ್ರಮುಖರು

ಮಧ್ವಮುನಿ ಬೋಧಿಸಿದ ಈ ತತ್ವಚಿಂತನೆಯು

ರುದ್ರೇಂದ್ರ, ದೇವಗುರು, ಎಲ್ಲರಿಗೂ ಮಾನ್ಯ
 
ಒಂಬತ್ತನೆಯ ಸರ್ಗ / 147
 
24
 
25
 
26
 
27
 
॥ ೨೭ ॥