This page has been fully proofread once and needs a second look.

ಇಪ್ಪತ್ತು ಮತ್ತೊಂದು ದುರ್ಭಾಗ್ಷ್ಯವುಂಟು

ವೇದಗಳ ಸಹಜಾರ್ಥ ಇದರಿಂದ ಕಲುಷಿತವು

ಇಂಥ ದುರ್ಭಾಷ್ಯಗಳ ಖಂಡಿಸುವ ಸಲುವಾಗಿ

ಅಂದಿಗೂ ಇಂದಿಗು ಎಂದಿಗೂ ಇರಬಲ್ಲ

ಖಂಡನೆಗೆ ಲವಲೇಶ ಆವಕಾಶ ಇರದಂಥ

ಭಾಷ್ಯವನು ರಚಿಸಿದರು ಆನಂದ ತೀರ್ಥರು
 
॥ ೧೨ ॥
 
ಶ್ರೀ ಸತ್ಯತೀರ್ಥರಿಂದ ಭಾಷ್ಯ ಲೇಖನ
 

 
ಮಂಗಳವ ನೀಡುವ ಗಂಗಾ ತರಂಗಗಳು
 

ಭೋರ್ಗರೆದು ಪ್ರವಹಿಸುವ ಪುಣ್ಯ ಪ್ರದೇಶದಲ್ಲಿ

ಅಪ್ರತಿಮ ಕಾಂತಿಯಲ್ಲಿ ಮೆರೆವ ಹರಿಮಂದಿರವ

ನಿರ್ಮಿಸುವ ರೂವಾರಿ ಎಂತಹ ಪೂತ ?

ಅಂತಹ ಶಿಲ್ಪಕ್ಕೆ ಸಮನಾದ ಭಾಷ್ಯಕ್ಕೆ

ಲೇಖನಿಯ ನೀಡಿದರು ಶ್ರೀ ಸತ್ಯತೀರ್ಥರು
 
॥ ೧೩ ॥
 
ವಿದ್ವತ್ಸಭೆಗೆ ಆಗಮನ
 

 
ಬದರಿಕಾಶ್ರಮದಲ್ಲಿ ಆನಂದ ತೀರ್ಥರು

ಪರಮಾತ್ಮ ನರಹರಿಗೆ ಕೈಮುಗಿದು ನಿಂದು

ಆತನಾಣತಿಯನ್ನು ಪೂರೈಸಲೆಂದು

ನೂರಾರು ಶಿಷ್ಯರನು ಜೊತೆ ಮಾಡಿಕೊಂಡು

ಹಾದಿಯಲಿ ಹಲವಾರು ಕ್ಷೇತ್ರಗಳ ಕಂಡು

ಗೋದಾವರೀ ನದಿಯ ದಂಡೆಯನು ಸೇರಿದರು
 
॥ ೧೪ ॥
 
ಗೋದಾವರೀ ನದಿಯ ತೀರದೊಳು ನೆರೆದಿದ್ದ

ವೇದಗಳ ಹದಿನೆಂಟು ಶಾಖೆಗಳ ಪರಿಣತರು

ಆನಂದ ತೀರ್ಥರನು ಪರಿಕಿಸುವ ಸಲುವಾಗಿ
 

ತೂರಿದರು ಪ್ರಶ್ನೆಗಳ ಸರಮಾಲೆಯನ್ನೇ

ಸಕಲ ವೇದದ ಸಾರ ವಿವರಿಸಿದ ಮಧ್ವಮುನಿ
 

ಖಂಡನೆಯ ಮಾಡಿದರು ಆರು ದರ್ಶನವ
 
144 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
1
 
॥ ೧೫ ॥