This page has been fully proofread once and needs a second look.

ಮಧ್ವಮುನಿಗಳ ಮನವು ಸುಜ್ಞಾನದ ಜಲಧಿ

ವ್ಯಾಸಮುನಿಗಳಿಗದುವೆ ಅತ್ಯಂತ ಪ್ರಿಯವಹುದು

ಆ ಚಿತ್ತ ಜಲಧಿಯಲ್ಲಿ ವ್ಯಾಸಮುನಿ ನೆಲೆಸಿದರು

ತೊರೆಯದಾದರು ಅವರು ಆ ಪೃಥುಲ ಶರಧಿಯನು

ಇದರಿಂದ ಗುರುವಿರಹ ಮಧ್ವರಿಗೆ ಇಲವಾಯ್ತು

ಪೊಂದಿದರು ಸಂತಸವ ಸತತವಾಗಿ
 
॥ ೪ ॥
 
ಸಾವಧಾನದಿ ಅವರು ಹಿಮಗಿರಿಯನಿಳಿದರು
 

ಸರಸರನೆ ಸರಿಯುತ್ತ ದಾರಿಯನ್ನು ಕ್ರಮಿಸಿದರು

ಹಾದಿಯಲಿ ಹಲವಾರು ಮೃಗಗಳನ್ನು ಕಂಡರು

ಕ್ರೂರಮೃಗಗಳಿಗೆಲ್ಲ ಸಿಂಹದೋಪಾದಿಯಲಿ

ಸಾಧು ಪ್ರಾಣಿಗಳೊಡನೆ ಸೌಮ್ಯತೆಯ ತೋರುತ್ತ

ಉಚಿತ ರೀತಿಯಲವರು ಎಲ್ಲರಿಗೂ ಕಂಡರು
 
॥ ೫ ॥
 
ವಾರಿಧಿಯ ಲಂಘಿಸಿದ ವಾನರೇಂದ್ರನ ತೆರದಿ

ರತ್ನರಾಜನ ತಂದ ವಾಸುದೇವನ ತೆರದಿ

ಸೌಗಂಧಿಕೆಯ ತಂದ ಭೀಮಸೇನನ ತೆರದಿ

ಆನಂದಮಠದತ್ತ ಮರಳಿದರು ಮಧ್ವರು

ಇದ ಕಂಡು ಅಲ್ಲಿನ ಶಿಷ್ಯಗಣವೆಲ್ಲ
 

ಕುಣಿ ಕುಣಿದು, ನಲಿನಲಿದು ಮುದದಿಂದ ಮಾಪಾಡಿದರು
 
॥ ೬ ॥
 
ಅಗ್ನಿಶರ್ಮ, ಮತ್ತಿತ್ತೈನ್ನೈದು ಬ್ರಾಹ್ಮಣರು

ಐದಾರು ಜನರುಣುವ ಭಕ್ಷ್ಯಗಳ ತಂದು

ಅರುಹಿದರು ಮಧ್ವರಿಗೆ ಸ್ವೀಕರಿಸಿ ಎಂದು

ಚರಾಚರಾತ್ಮಕ ಜಗವ ಭುಜಿಸಬಲ್ಲರು ಅವರು

ಚಿಟಿಕೆಯಲ್ಲಿ ಮುಗಿಸಿದರು ಭೂರಿಭೋಜನವ

ವಿಸ್ಮಯವಿದೆಂತಹುದು ! ಚಕಿತಗೊಂಡರು ಜನರು
 
142 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
॥ ೭ ॥