2023-03-08 08:21:47 by jayusudindra
This page has been fully proofread once and needs a second look.
ಶ್ರೀ ಗುರುಭ್ಯೋ ನಮಃ
ಒಂಬಭತ್ತನೆಯ ಸರ್ಗ
ನಾರಾಯಣಾಶ್ರಮದಿಂದ ವ್ಯಾಸಾಶ್ರಮಕ್ಕೆ ಆಗಮನ
ಕವಿಲೋಕನಾಯಕರು ಆನಂದ ತೀರ್ಥರು
ಏಕಾಗ್ರ ಚಿತ್ತದಲ್ಲಿ ಸ್ತುತಿಸುತ್ತ ನಿಂದು
ಸಾಷ್ಟಾಂಗ ಗೈದರು ಆದರದಿ ಶ್ರೀ ಹರಿಗೆ
ಸೌಖ್ಯ ತೀರ್ಥರ ಕಂಡು ಧರ್ಮ ಪುತ್ರನು ಆಗ
"ವೇದನಾಯಕ ಪುರಿಗೆ ಮರಳಿ ತೆರಳಿರಿ ನೀವು"
ಇಂತೆಂದು ಆಣತಿಯನಿತ್ತನವನು ॥ ೧ ॥
ಪರಮಾತ್ಮನಾಣತಿಯ ಶಿರದಲ್ಲಿ ಹೊತ್ತು
ವ್ಯಾಸಮುನಿದರ್ಶನವ ಮನದಲ್ಲಿ ಬಿತ್ತು
ಮಧ್ವಮುನಿ ಸೇರಿದರು ವ್ಯಾಸಗುರುಧಾಮಕೆ
ಶ್ರಾವ್ಯವಾದುದನೆಲ್ಲ ಶ್ರವಣ ಮಾಡುತ್ತ
ಗುರು ಚಿತ್ತವೃತ್ತಿಯನು ಸುಲಭದಲಿ ಅರಿಯುತ್ತ
ಮಧ್ವಮುನಿ ಅಲ್ಲಿಂದ ತೆರಳಲೆಳಸಿದರು ॥ ೨ ॥
ವ್ಯಾಸಾಶ್ರಮದಿಂದ ವಿಶಾಲ ಬದರಿಗೆ ಪ್ರಯಾಣ
ಮಂದಹಾಸದ ಮೃದು ಸುಂದರಾನನದವರು
ವಂದನೀಯರ ನಡುವೆ ಅಭಿವಂದಿತರು ಅವರು
ಪ್ರಾಜ್ಞರ ಕುಲಕೆಲ್ಲ ಮೌಲಿಮಣಿಯಿವರು
ಇಂಥ ಶ್ರೀ ವ್ಯಾಸರಿಗೆ ಸಾಷ್ಟಾಂಗ ನಮಿಸುತ್ತ
ಅಪ್ರತಿಮ ಸುಜ್ಞಾನಿ ಆನಂದ ತೀರ್ಥರು
ಗುರುಗಳನುಮತಿ ಪಡೆದು ಅಲ್ಲಿಂದ ತೆರಳಿದರು ॥ ೩ ॥
ಒಂ
ನಾರಾಯಣಾಶ್ರಮದಿಂದ ವ್ಯಾಸಾಶ್ರಮಕ್ಕೆ ಆಗಮನ
ಕವಿಲೋಕನಾಯಕರು ಆನಂದ ತೀರ್ಥರು
ಏಕಾಗ್ರ ಚಿತ್ತದಲ್ಲಿ ಸ್ತುತಿಸುತ್ತ ನಿಂದು
ಸಾಷ್ಟಾಂಗ ಗೈದರು ಆದರದಿ ಶ್ರೀ ಹರಿಗೆ
ಸೌಖ್ಯ ತೀರ್ಥರ ಕಂಡು ಧರ್ಮ ಪುತ್ರನು ಆಗ
"ವೇದನಾಯಕ ಪುರಿಗೆ ಮರಳಿ ತೆರಳಿರಿ ನೀವು"
ಇಂತೆಂದು ಆಣತಿಯನಿತ್ತನವನು ॥ ೧ ॥
ಪರಮಾತ್ಮನಾಣತಿಯ ಶಿರದಲ್ಲಿ ಹೊತ್ತು
ವ್ಯಾಸಮುನಿದರ್ಶನವ ಮನದಲ್ಲಿ ಬಿತ್ತು
ಮಧ್ವಮುನಿ ಸೇರಿದರು ವ್ಯಾಸಗುರುಧಾಮಕೆ
ಶ್ರಾವ್ಯವಾದುದನೆಲ್ಲ ಶ್ರವಣ ಮಾಡುತ್ತ
ಗುರು ಚಿತ್ತವೃತ್ತಿಯನು ಸುಲಭದಲಿ ಅರಿಯುತ್ತ
ಮಧ್ವಮುನಿ ಅಲ್ಲಿಂದ ತೆರಳಲೆಳಸಿದರು ॥ ೨ ॥
ವ್ಯಾಸಾಶ್ರಮದಿಂದ ವಿಶಾಲ ಬದರಿಗೆ ಪ್ರಯಾಣ
ಮಂದಹಾಸದ ಮೃದು ಸುಂದರಾನನದವರು
ವಂದನೀಯರ ನಡುವೆ ಅಭಿವಂದಿತರು ಅವರು
ಪ್ರಾಜ್ಞರ ಕುಲಕೆಲ್ಲ ಮೌಲಿಮಣಿಯಿವರು
ಇಂಥ ಶ್ರೀ ವ್ಯಾಸರಿಗೆ ಸಾಷ್ಟಾಂಗ ನಮಿಸುತ್ತ
ಅಪ್ರತಿಮ ಸುಜ್ಞಾನಿ ಆನಂದ ತೀರ್ಥರು
ಗುರುಗಳನುಮತಿ ಪಡೆದು ಅಲ್ಲಿಂದ ತೆರಳಿದರು ॥ ೩ ॥