This page has been fully proofread once and needs a second look.

ನಾರಾಯಣನಾ ನುಡಿಯು ಭೂಧರನ ಮುಖದಿಂದ

ಧರಣಿಯಲಿ ಹರಿಯುವಾ ಪುಣ್ಯನದಿಯಂತಾಯ್ತು

ಮಧ್ವಮುನಿಗಳ ಶ್ರೇಷ್ಠ ಪೃಥು ಬುದ್ಧಿ ವಾರಿಧಿಯು

ಚಂದ್ರಕಿರಣವ ಕಂಡು ಉಕ್ಕುವಾ ಕಡಲಾಯ್ತು

ಕಡಲೊಡಲು ನದಿಯನ್ನು ಸ್ವೀಕರಿಸುವಂತೆ

ಮಧ್ವಮಾನಸದಲ್ಲಿ ದೇವ ನುಡಿ ಹರಿಯಿತು
 
॥ ೫೨ ॥
 
"ಸರ್ವಶ್ರೇಷ್ಠರು ನಮ್ಮ ವ್ಯಾಸ ನಾರಾಯಣರು

ಅವರು ನುಡಿದಿಹ ಮಾತು ಎಲ್ಲರಿಗೂ ಮಾನ್ಯ
"
ಇಂತೆಂದು ಚಿಂತಿಸುತ ಮಧ್ವಗುರುವರ್ಯರು

ಭಗವಂತನಾಣತಿಗೆ ಸಮ್ಮತಿಯನರುಹಿದರು

ಯಾರಿಗೂ ಸುಲಭದಲಿ ಸಾಧ್ಯವಾಗದ ಮಾತ
ಶಿರದ
ಲ್ಲಿ ಸಾಧ್ಯವಾಗದ ಮಾತ
ಶಿರದಲ್ಲಿ
ಧರಿಸಿದರು ಅತಿಶಯದ ಭಕ್ತಿಯಲಿ
 
॥ ೫೩ ॥
 
ತತ್ವವನು ಬೋಧಿಸುವ ಮೂರು ವೇದಗಳಂತೆ

ಪಾಪಗಳ ಪರಿಹರಿಪ ಮೂರು ಅಗ್ನಿಗಳಂತೆ

ಸಕಲವನು ಹೊತ್ತಿರುವ ಮೂರು ಲೋಕಗಳಂತೆ

ವ್ಯಾಸ, ನಾರಾಯಣರು, ಶ್ರೀ ಪೂರ್ಣಪ್ರಜ್ಞರು

ಭವ್ಯತೆಯ ಬೆಡಗಿಂದ ಕಂಗೊಳಿಸಿ ಮೆರೆದರು
 

ಆನಂದ ಪೂರ್ಣರು ಈ ಮೂರು ಮಹಿಮರು
 
52
 
138 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
॥ ೫೪ ॥
 
 
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀ ಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಎಂಟನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.