This page has been fully proofread once and needs a second look.

ನರದೇವ ಸೋದರನು ನಾರಾಯಣ
 

ಪರಮೋಚ್ಚ ವಿಕ್ರಮನು, ಪರಮಾರ್ಥ ಸಾಧಕನು

ಸಜ್ಜನರ ಸಂತಸಕೆ ಎಂದೆಂದೂ ಭಾಜನನು

"ಹರಿ " ಎಂಬ ಹೆಸರಿಂದ ಯಮಪುತ್ರನಾದನು
 
11
 

"ಕೃಷ್ಣ" ಎಂಬುವ ಮತ್ತಿನ್ನೊಂದು ಹೆಸರಿಂದ

ಹರಿಯ ಆ ರೂಪಕ್ಕೆ ಅನುಜನೆಂದೆನಿಸಿದನು
 
॥ ೪೦ ॥
 
'ಹಾಹತ್ತಾವತಾರನಿಗೆ ಅಭಿವಂದನೆ, ನಿನಗೆ ಅಭಿನಂದನೆ
 
ವಂದನೆ
ನಾರಾಯಣಾದಿಗಳ ನೂರು ಸ್ವರೂಪನಿಗೆ

ವಿಶ್ವಾದಿ ಸಾವಿರಕ್ಕೂ ಮಿಗಿಲಾದ ರೂಪನಿಗೆ

ಅವಿಕಾರಿ ರೂಪನಿಗೆ, ಅಂತ್ಯವಿರದವನಿಗೆ

ಸಕಲ ಚಿತ್ಸುಖನಿಗೆ, ವಂದನೆಯು ನಿನಗೆ

ವಂದನೆಯು, ವಂದನೆಯು, ವಂದನೆಯು ನಿನಗೆ?"
 
॥ ೪೧ ॥
 
ನಾರಾಯಣ ದರ್ಶನ - ಭಾಷ್ಯ ರಚನೆಗೆ ಆಜ್ಞಾಸ್ವೀಕಾರ
 

 
ಇಂತೆಂದು ಭಜಿಸುತ್ತ ಶ್ರೀಮದಾಚಾರ್ಯರು

ನಮಿಸಿದರು ಭಕುತಿಯಲ್ಲಿ ಪರಮಾತ್ಮಗೆ

ದೇವ ದೇವೋತ್ತಮನ ಆದರವ ಪಡೆದರು

ವ್ಯಾಸ ನಾರಾಯಣರ ದ್ವಂದ್ವ ರೂಪಗಳೆರಡು

ಪರಸ್ಪರರ ಆದರಿಸಿ ಆಸೀನರಾಗಲು

ಮಧ್ವಮುನಿ ಕುಳಿತರು ನಂತರದಿ ನಮಿಸಿ
 
॥ ೪೨ ॥
 
ಸರಸ ಸಂಭಾಷಣೆ, ಸಲ್ಲಾಪ, ಮುಂತಾದ

ಪರಿಪರಿಯ ಸನ್ನಡತೆ, ಶಿಷ್ಟನುಡಿಗಳಿಂದ

ಲೋಕಪತಿ ಆಗಿರುವ ಆ ನಮ್ಮ ನಾರಾಯಣ
 

ವ್ಯಾಸದೇವರ ಭವ್ಯ ಆನನವ ವೀಕ್ಷಿಸುತ

ಭಕ್ತಿ, ನಮ್ರತೆಗಳೇ ಮೈವೆತ್ತ ಮಧ್ವರನು
 

ಕಂಡು ಏಕಾಂತದಲ್ಲಿ ಇಂತೆಂದು ನುಡಿದನು
 
ಎಂಟನೆಯ ಸರ್ಗ / 135
 
40
 
41
 
42
 
43
 
॥ ೪೩ ॥