This page has been fully proofread once and needs a second look.

ರುತುರತ್ಸುತನ ಮುಖದಿಂದ ವಾರ್ತೆಯೊಂದನು ಕೇಳಿ

ಸಂತೋಷ ಸಂಭ್ರಮದ ಸುದ್ದಿಯಿಂದಲಿ ಹಿಗ್ಗಿ

ಮಧುವೈರಿ ಪಯಣಿಸಿದ ಮುಂದಕ್ಕೆ ಸಾಗಿ

ಹರಿತಿಗ್ ಚಕ್ರದಲ್ಲಿ ಶೋಭಿತನು ತಾನಾಗಿ

ಪುಣ್ಯಚರಿತರಿಂದೆಲ್ಲ ಸೇವಿತನು ತಾನಾಗಿ

ಕಡಲ ಮಧ್ಯದ ಪುರವ ವೈಭವದಿ ಸೇರಿದನು
 
॥ ೩೨ ॥
 
ಮದಿಸಿದಾನೆಯ ತೆರದಿ ಗರ್ವವನು ತೋರಿದ್ದ

ಕುಂಭಕರ್ಣ ಎಂಬ ಸ್ಕೂಥೂಲ ದಾನವನನ್ನು

ಪ್ರಭುವು ಸಂಹರಿಸಿದನು ಸೋದರನ ಸಹಿತ

ಮೊನಚಾದ ಬಾಣಗಳ ದಿವ್ಯ ಪ್ರಯೋಗದಲ್ಲಿ
ಲಿ
ಚಾಪವಿದ್ಯೆಯ ತನ್ನ ಕೌಶಲ್ಯ ತೋರುತ್ತ

ದಾನವರ ಸೈನ್ಯವನ್ನು ಸುಲಭದಲ್ಲಿ ಗೆಲಿದನು
 
॥ ೩೩ ॥
 
ಅಗ್ನಿದೀಕ್ಷೆಯ ತೊಟ್ಟು ಪರಿಶುದ್ಧಳಾಗಿದ್ದ

ಪತ್ನಿಯಿಂದೊಡಗೂಡಿ ಸೋದರನ ಸಹಿತ

ಪರಮಾತ್ಮ ಹೊಕ್ಕನು ನಿಜಪುರಕೆ ಆಗ

ಬಹಳ ಕಾಲದವರೆಗೆ ಸಜ್ಜನರ ಪಾಲಿಸುತ

ಭಕ್ತರಾಭೀಷ್ಟವನ್ನು ಸರ್ವದಾ ನೀಡುತ್ತ

ಮೂಲರೂಪದೊಳಾತ ಐಕ್ಯವನ್ನು ಹೊಂದಿದನು
 
॥ ೩೪ ॥
 
ಹರಿಕೀರ್ತಿ ಕಥನದಲ್ಲಿ ಪ್ರವೃತ್ತನಾಗಿ

ಪರಿಶುದ್ಧ ಮನವುಳ್ಳ ಬ್ರಾಹ್ಮಣನ ಪತ್ನಿಯಲಿ

ಹರಿಯು ಅವತರಿಸಿದನಲ್ಲಿ ಮತ್ತೊಂದು ಬಾರಿ

ಮಹಿದಾಸನೆಂಬುವ ಹೆಸರನ್ನು ಹೊತ್ತು

ಪೂಜ್ಯ ಚರಣನು ಎಂಬ ಖ್ಯಾತಿಯನ್ನು ಹೊತ್ತು

ಪರಿಪರಿಯ ಸಚ್ಛಾಸ್ತ್ರ ರಚಿಸಿದನು ಆತ
 
ಎಂಟನೆಯ ಸರ್ಗ । 133
 
32
 
33
 
34
 
35
 
॥ ೩೫ ॥