This page has been fully proofread once and needs a second look.

ಪರಮಾತ್ಮ ಕ್ರಮಿಸಿದನು ದುರ್ಗಮದ ಹಾದಿಯನು

ಏರಿದನು ಹಲವಾರು ಉತ್ತುಂಗ ಶಿಖರವನ್ನು
ನು
ಆ ನಿಬಿಡ ಕಾನನದಿ ಹಲವಾರು ದುರ್ಜನರು!

ಖರ ದೂಷಣರ ಪರಿಯ ಖೂಳ ರಕ್ಕಸರು !

ಸುಜನರಿಗೆ ಪರಿಪರಿಯ ವ್ಯಾಕುಲವ ಕೊಡುವವರ

ಭಗವಂತ ನೂಕಿದನು ಘೋರ ನರಕದೊಳು
 
॥ ೨೮ ॥
 
ಪ್ರಮಾದ, ಮದದಿಂದ ತುಂಬಿರುವ ದಾನವರ

ಸುರಪತಿಯ ಶತ್ರುಗಳ ಅಪರಿಮಿತ ಗಡಣವನು

ಪರಮಾತ್ಮ ಕ್ಷಣದಲ್ಲಿ ನಿಗ್ರಹಿಸಿ ಬೆಳಗಿದನು

ರುಚಿರಾಶ್ರಮಾಂಗಣವ ತೇಜದಲಿ ಬೆಳಗಿಸುತ

ಲೋಕವಂದಿತಳಾದ ಲೋಕಮಾತೆಯ ಸಹಿತ
 

ಭಗವಂತ ಬೆಳಗಿದನು ಪ್ರಖರ ಕಾಂತಿಯಲಿ
 
L
 
॥ ೨೯ ॥
 
ತನ್ನ ಪ್ರಿಯತಮೆಯಾದ ಶ್ರೀ ಮಹಾಲಕುಮಿಯನು

ಆಪಹರಿಸಿ ಅತಿಯಾದ ವ್ಯಾಕುಲವ ನೀಡಿದ್ದ

ನರದೇವ ಮಂಡಲವ, ಅಷ್ಟ ದಿಕ್ಷಾಲಕರ
 
ಪಾಲಕರ
ಸುಲಭದಲಿ ನಿಗ್ರಹಿಸಿ ಆ ನಮ್ಮ ಭಗವಂತ

ದುಷ್ಟದಾನವನಾದ ಹತ್ತು ತಲೆಯವನನ್ನು
 

ಕಂಡು ಕಾಣದ ರೀತಿ ತಾತಾತ್ಸಾರ ಮಾಡಿದನು
 
॥ ೩೦ ॥
 
ಪವನನಂದನನಿಂದ ಅಭಿವಂಧಿತನು ಹರಿಯು

ಇಂದ್ರಸುತ ವಾಲಿಯನು ಶರದಿಂದ ಸಂಹರಿಸಿ

ಹರಿಸೂನುವಿಗೆ ಪರಮ ಕರುಣೆಯನು ತೋರಿದನು
 

ನಿಜರಾಜ್ಯ ಸಂಪದವ ಆತನಿಗೆ ನೀಡಿ

ಜ್ಞಾನ ಸಾಮ್ರಾಜ್ಯದ ದಾನವನು ಮಾಡಿ

ಪರಮಾತ್ಮ ತೋರಿದನು ಕರುಣಾ ಕಟಾಕ್ಷ
 
132 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
3:
 
॥ ೩೧ ॥