This page has not been fully proofread.

ಅನುಜನ ಜೊತೆಗೂಡಿ ಪರಮಾತ್ಮನಾಗ
ಮರಳಿದನು ಮತ್ತೊಮ್ಮೆ ಮಧುರ ಪುರಿಗೆ
ಜನಕನಿಗೆ ಒಲವನ್ನು ತಂದಿತ್ತ ನಗರಿಗೆ
ಜಗದೇಕ ಸುಂದರನು ನಮ್ಮ ಪರಮಾತ್ಮ
ಸ್ತ್ರೀಪುರುಷರೆನ್ನದೆಲೆ ಎಲ್ಲರ ಕಂಗಳಿಗೆ
ಹಬ್ಬವಾಯಿತು ಇಂಥ ಸ್ಮರಣೀಯ ದೃಶ್ಯ
 
ನಂತರದಿ ಲೀಲೆಯನ್ನು ತೋರುತ್ತ ಪರಮಾತ್ಮ
ಶಿವನ ಆ ಧನುವನ್ನು ಸುಲಭದಲ್ಲಿ ಖಂಡಿಸಿದ
ಉಗ್ರಸೇನಾ ಬಲವ ಹೆಮ್ಮೆಯಲ್ಲಿ ಹೊಂದಿದ್ದ
ರಾಜ ಕುವರರ ಗರ್ವ ಕ್ಷಣದಲ್ಲಿ ಭಂಗಿಸಿದ
ಬ್ರಹ್ಮಪಿತ ಪರಮಾತ್ಮ ವಿಪ್ರಗುರುವನ್ನು ತಣಿಸಿ
ಮುದವಿತ್ತ ಭಕ್ತರಿಗೆ ಮಹಿಮೆಯನು ಉಣಿಸಿ
 
ಪದ್ಮಪತ್ರದ ತೆರದಿ ನೇತ್ರಗಳ ಪಡೆದಿದ್ದು
ರಾಜಕುವರಿಯ ಹಾಗೆ ಧರಣಿಯಲ್ಲಿ ಜನಿಸಿರ್ದ
 
ಲಕುಮಿಯನು ವರಿಸಿದನು ನಮ್ಮ ಶ್ರೀ ಹರಿಯು
ಸಹಜ ಲೀಲೆಗಳಿಂದ ಕ್ಷಾತ್ರವೈರಿಯ ಗೆಲಿದು
ಕಡಲಿನಾ ಪರಿಯಲ್ಲಿ ದುರ್ಗಮವು ಎನಿಸಿದ್ದ
ಪುರವ ಹೊಕ್ಕನು ನಮ್ಮ ಪರಮಾತ್ಮ ಮುದದಿ
 
ಜನನಿಯನು ಸಂತುಷ್ಟಗೊಳಿಸುವ ಸಲುವಾಗಿ
ಪತ್ನಿಯಿಂದೊಡಗೂಡಿ, ಅನುಜನೊಂದಿಗೆ ಕೂಡಿ
ವೈರಿಗಳನೆದುರಿಸುತ, ವಿಜಯವನು ಸಾಧಿಸುತ,
ಧ್ವಜವನ್ನು ಹಾರಿಸುತ, ಲಾಂಛನವ ತೋರುತ್ತ
ಪರಮಾತ್ಮ ತೆರಳಿದನು ಕಾನನದ ಕಡೆಗೆ
ಭಕ್ತರಾಭೀಷ್ಟವನು ಪೂರೈಸುವೆಡೆಗೆ
 
ಎಂಟನೆಯ ಸರ್ಗ / 131
 
24
 
25
 
26
 
27