This page has been fully proofread once and needs a second look.

ನಖಚಕ್ರ ತೇಜ, ಬಲ, ಶಕ್ತಿಯಿಂದಲಿ ಕೂಡಿ

ನರಸಿಂಹ ರೂಪವನು ತಳೆದ ಆ ಭಗವಂತ

ಸೀಳಿ ಹಾಕಿದನಾತ ತನ್ನ ರಿಪುವನ್ನು

ಮತ್ತೊಮ್ಮೆ ಭಗವಂತ ತಾಪಸನ ರೂಪದಲಿ

ಚಕ್ರವೆಂಬಾಯುಧವ ತ್ವರಿತದಲ್ಲಿ ಬಳಸಿ
ನಕ್ರನನ್

ನಕ್ರನ
ನು ಸಂಹರಿಸಿ ಗಜವ ರಕ್ಷಿಸಿದ
 
॥ ೧೬ ॥
 
ಕೌಮಾರ್ಯ ತೇಜದಲಿ ಕಂಗೊಳಿಸಿ <error>ಮರೆಯುತ್ತ
</error><fix>ಮೆರೆಯುತ್ತ</fix>
ಬಾಲವಟು ವಾಮನನ ರೂಪವನು ತಳೆಯುತ್ತ

ಪ್ರತಿಭಾ ಪ್ರಕಾಶದಿಂ ದಾನವರ ಮೆಚ್ಚಿಸುತ

ದಾನವಾಧಿಪನಾದ ಬಲಿಯ ಬಳಿ ಐತಂದು

ದಾನವನು ಯಾಚಿಸುತ ಸುತ್ತಲ ಲೋಕಕೆ ತುಳಿದು
 

ಸುರರ ಲೋಕವ ಮತ್ತೆ ಸುರಪತಿಗೆ ನೀಡಿದನು
 
॥ ೧೭ ॥
 
ಝಗ ಝಗನೆ ಬೆಳಗುವ ಪರಶುವನು ಹಿಡಿದು

ಕ್ಷಾತ್ರಕುಲ ತಿಮಿರಕ್ಕೆ ರವಿಯಂತೆ ಮೆರೆದು

ತಾಪಸರ ದಿವ್ಯಾಂಶ ಸಂಭೂತನೆಂದೆನಿಸಿ

ಜಗಕೆ ಮಂಗಳವೀವ ದಿವ್ಯಕಾರ್ಯವನೆಸಗಿ

ಧರೆಯೊಳವತರಿಸಿದ ನಾರಾಯಣಾವತಾರನನು

ಜ್ಞಾನಿಗಳು ಸ್ತುತಿಸಿದರು ಮತ್ತೊಬ್ಬರವಿಯೆಂದು
 
॥ ೧೮ ॥
 
ಪರಮ ಕರುಣಾಳು, ಈ ನಮ್ಮ ಭಗವಂತ

ಅಷ್ಟವಸುಗಳ ಪರಿಯ ದೇವಗಣಕೆಲ್ಲ

ಮುದವನ್ನು ನೀಡುತ್ತ ಸಂತಸವ ಕೊಡಲೆಂದು

ಹಿಂದೊಮ್ಮೆ ಜನಿಸಿದನು ಸೂರ್ಯವಂಶದಲಾತ

ಹತ್ತು ದಿಶೆಯನು ಗೆಲಿದ, ಸಂಪದದಿ ಕೂಡಿದ್ದ

ದಶರಥನು ಆತನಿಗೆ ತಂದೆಯೆನಿಸಿದ್ದ
 
ಎಂಟನೆಯ ಸರ್ಗ / 129
 
16
 
17
 
18
 
19
 
॥ ೧೯ ॥