This page has been fully proofread once and needs a second look.

"ವಿಧಿ, ವಾಯು, ಗರುಡರು, ರುದ್ರೇಂದ್ರ ದೇವಗಣ
 

ಈ ಸುರರ ಅನುಗರು ಗಂಧರ್ವ, ಅಸುರರು
 

ಎಲ್ಲರನೂ ಸೃಜಿಸುವನು ಲೀಲೆಯಿಂ ಭಗವಂತ

ಅನವರತ ಸೃಷ್ಟಿಸುತ, ಪರಿಪಾಲಿಸುತ್ತ

ಮತ್ತೆ ಇವರೆಲ್ಲರನೂ ಸಂಹಾರ ಮಾಡುತ್ತ

ಅವರವರ ಗತಿಯನ್ನು ಹೊಂದಿಸುವನೀತ
 
॥ ೧೨ ॥
 
"ಅಗಣ್ಯ ಸದ್ಗುಣ ವಿದೂಷಣನು ಈತ
 

ಸಕಲ ದೋಷ ವಿದೂರನಿವನು
 

ಎಲ್ಲವನು ಅಂಕೆಯಲ್ಲಿರಿಸಿಕೊಂಡಿರುವವನು

ಸ್ಮರಣೆ, ಸ್ತೋತ್ರಗಳಿಂದ ತನ್ನೆಲ್ಲ ಭಕುತರೂ
 

ಮುಕುತಿಯನು ಆರ್ಜಿಸಲು ಅನುಕೂಲವಾಗಲು
 
ಶ್

ಸ್
ವೇಚ್ಛೆಯಿಂ ಧರಿಸಿಹನು ವಿವಿಧ ರೂಪಗಳ
 
ಮತ್ಸಾ
॥ ೧೩ ॥
 
ಮತ್ಸ್ಯಾ
ದಿ ಭಗವದ್ರೂಪ ವರ್ಣನೆ
 

 
ಹಿಂದೊಮ್ಮೆ ಮತ್ಸಾ ಸ್ಯಾವತಾರವನ್ನು ಧರಿಸಿ

ವೇದಗಳ ಕದ್ದೊಯ್ದ ದೈತ್ಯನನು ವಧಿಸಿದನು

ಹಯಗ್ರೀವ ರೂಪದೊಳು ಮತ್ತೊಮ್ಮೆ ಹರಿಯು

ಮಧುವೆಂಬ ರಾಕ್ಷಸನ ಸಂಹರಿಸಿ ಕೊಂದನು

ನಾಲ್ಕು ವೇದಗಳನ್ನು ಈ ತರದಿ ಉದ್ಧರಿಸಿ

ನಾಲ್ಮೊಗದ ಬ್ರಹ್ಮನಿಗೆ ಮತ್ತೊಮ್ಮೆ ನೀಡಿದನು
 
॥ ೧೪ ॥
 
ಮತ್ತೊಮ್ಮೆ ಭಗವಂತ ಕೂರ್ಮ ರೂಪವ ತಾಳಿ

ದೇವ-ದೈತ್ಯರು ಕೂಡಿ ಮಥಿಸಿದಾ ಮಂದಿರವು

ಜಲಧಿಯಲಿ ಮುಳುಗುವುದ ತಡೆಹಿಡಿದು ನಿಲ್ಲಿಸಿದನು

ಸೂಕರನ ರೂಪವನು ತಳೆದು ಮತ್ತೊಮ್ಮೆ
 

ದೈತ್ಯನೊಬ್ಬನು ಎಳೆದು ನೀರಿನಲ್ಲಿ ಮುಳುಗಿಸಿದ

ಧರಣಿಯನು ಮೇಲೆತ್ತಿ ಸಂರಕ್ಷಿಸಿದನು
 
128 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥