This page has been fully proofread once and needs a second look.

ಇಂದ್ರಿಯವ ಜಯಿಸುವುದು ಅತಿ ಕಠಿಣವಹುದು

ನಿಷ್ಠುರದ ಜಪತಪವೇ ಇದಕ್ಕೆ ಸಾಧನವಹುದು

ಈ ವ್ರತವ ಸಾಧಿಸುತ ವನದಲಿಹನೆಂಬಂತೆ

ನಿರಪೇಕ್ಷ, ನಿರ್ಮಲದ ಆತ್ಮಸೌಖ್ಯದಿ ನಿರತ

ಬದರಿನಾರಾಯಣನನ್ನು ಮಧ್ವಮುನಿಗಳು ಕಂಡು

ಪರಮ ಸಂತೃಪ್ತಿಯಲ್ಲಿ ಆನಂದ ಪೊಂದಿದರು
 
॥ ೮ ॥
 
ಸಂಪೂರ್ಣ ಅರಳಿರುವ ಕಮಲ ಪುಷ್ಪದ ತೆರದಿ

ಶೋಭಿಸುತ ಬೆಳಗುತಿಹ ತಮ್ಮೆರಡು ಕಂಗಳಿಂ

ಆನಂದ ತೀರ್ಥರು ಪರಮ ವಿಸ್ಮಯದಿಂದ

ಧರ್ಮಬಾಹಿರ ಕರ್ಮ ಕಂಡು ಮುನಿಸಾಗುವ

ಯಮಧರ್ಮ ಪುತ್ರನಾ ನಾರಾಯಣನ ಕಂಡು

ಮನದೊಳಗೆ ಇಂತೆಂದು ಸ್ಮರಿಸತೊಡಗಿದರು
 
॥ ೯ ॥
 
ಶ್ರೀ ನಾರಾಯಣ ವರ್ಣನ
 

 
"ಸರ್ವರೊಳು ಉತ್ತಮನು, ಸರ್ವಗುಣ ಸಂಪನ್ನ

ಹಗಲಿರುಳು ಶ್ರೀ ಲಕುಮಿ ಸಂಗದಲ್ಲಿರುವವನು
ನಾ

ನಾಲ್ಮೊ
ಗದ ಬ್ರಹ್ಮನೇ ಮೊದಲಾದ ದೇವಗಣ

ಕೂಡಿರುವ ಹದಿನಾಲ್ಕು ಲೋಕವನ್ನೆಲ್ಲ

ಪ್ರಳಯವೈದಿಸುವನಿವನು ಇತಿಹಾಸ ಪುರುಷ

ಸರ್ವದೇವೋತ್ತಮನು ನಾರಾಯಣ
 
॥ ೧೦ ॥
 
"ಪ್ರಕೃತಿ ಎಂಬುದು ಒಂದು ಮಿಗಿಲಾದ ತತ್ವ

ಸತ್ವ, ರಜ, ತಮಸೆಂಬ ತ್ರಿಗುಣಗಳು ಕೂಡಿಹವು

ಅದಕಿಂತ ಮಿಗಿಲಾದ್ದು ಮಹತ್ತತ್ವವಿಹುದು

ಇದರಿಂದ ಮೂರು ವಿಧ ಅಹಂಕಾರ ತತ್ವವನೂ

ಪಂಚಭೂತಗಳನ್ನೂ, ಬ್ರಹ್ಮಾಂಡವನ್ನೂ

ಸೃಜಿಸಿಹನು, ಭಗವಂತ, ನಾರಾಯಣ
 
ಎಂಟನೆಯ ಸರ್ಗ / 127
 
8
 
10
 
11
 
॥ ೧೧ ॥