This page has been fully proofread once and needs a second look.

ಭಾಗವತ, ಭಾರತ, ರಾಮಾಯಣಾದಿಗಳು

ಬ್ರಹ್ಮಸೂತ್ರಗಳಂಥ ಶ್ರೇಷ್ಠತಮ ಸೂತ್ರಗಳು

ಸಜ್ಜನಕೆ ಪ್ರಿಯವಾದ ಪಂಚರಾತ್ರಗಳು

ವೇದಾದಿ ವಿದ್ಯೆಗಳ ಗೂಢಾರ್ಥವನ್ನೆಲ್ಲ

ಅಪ್ರತಿಮ ಜ್ಞಾನಿ ಶ್ರೀ ಮಧ್ವಮುನಿಗಳು

ಅತ್ಯಲ್ಪ ಕಾಲದಲಿ ಅಧ್ಯಯನ ಮಾಡಿದರು
 
॥ ೪ ॥
 
ಶ್ರೀ ಮಧ್ವಮುನಿಗಳು ಋಜುಗಣ ಶ್ರೇಷ್ಠರು

ಅನಂತ ಜನುಮದಲಿ ಸಾಧನೆಯ ಮಾಡಿಹರು

ಸಕಲ ಶಾಸ್ತ್ರಗಳಲ್ಲಿ ನಿಷ್ಣಾತ ಕೋವಿದರು

ಇಂತಹ ಮಧ್ವರಿಗೆ ಆ ಶೇಷಶಯನನು

ಮತ್ತಷ್ಟು ಜ್ಞಾನವನ್ನು ಪ್ರೀತಿಯಲಿ ಕರುಣಿಸಿ

ಉತ್ತಮೋತ್ತಮರನ್ನು ಉತ್ಕೃಷ್ಟಗೊಳಿಸಿದನು
 
॥ ೫ ॥
 
ಶ್ರೀ ವೇದವ್ಯಾಸರೊಂದಿಗೆ ನಾರಾಯಣಾಶ್ರಮಕ್ಕೆ ಪ್ರಯಾಣ
 

 
ಬಳಿಕ ಆ ಸರ್ವಜ್ಞ ಶ್ರೀಮದಾಚಾರ್ಯರು

ಬಾದರಾಯಣರೆಂಬ ಸಂಪದವ ಹೊಂದಿ
 

ಬದರಿಕಾಶ್ರಮದಲ್ಲಿ ಮತ್ತೊಂದು ಭಾಗದಲ್ಲಿ
ಲಿ
ನಾರಾಯಣ ಎಂಬ ಮತ್ತೊಂದು ರೂಪದಲಿ

ನೆಲೆಸಿದ್ದ ಶ್ರೀ ಹರಿಯ ದರುಶನವ ಪೊಂದಲು

ತೆರಳಿದರು ತ್ವರಿತದಲಿ ಶ್ರೀ ಹರಿಗೆ ನಮಿಸಲು
 
॥ ೬ ॥
 
ಉತ್ತಮೋತ್ತಮವಾದ ವಲ್ಕಲದ ಕೌಪೀನ

ಶ್ರೇಷ್ಠತಮ ಮೌಂಜಿಯನು ಧರಿಸಿಹನು ಆತ

ಭವ್ಯಕಾಂತಿಯ ಬೆಡಗು ಆ ಜಟಾಮಂಡಲಕೆ

ಧೂಮವರ್ಜಿತ ಭವ್ಯ ವಹಿಹ್ನಿಯಂದದ ತೇಜ

ಆದಿ ಪುರುಷನು ಆತ ಆ ನಾರಾಯಣ

ಆ ಭವ್ಯ ಮೂರ್ತಿಯನ್ನು ಕಂಡರಾ ಮಧ್ವರು
 
126 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
4
 
5
 
6
 
7
 
॥ ೭ ॥