This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮಃ
 

 
ಎಂಟನೆಯ ಸರ್ಗ
 

 
ಶ್ರೀ ವೇದವ್ಯಾಸರ ಬಳಿ ಶ್ರೀ ಮಧ್ವಾಚಾರ್ಯರ ಶಿಷ್ಯವೃತ್ತಿ
 
0
 

 
ಬದರಿಕಾಶ್ರಮದಲ್ಲಿ ಆನಂದ ತೀರ್ಥರು

ಸುಜ್ಞಾನ, ನಯವಿನಯ ತೇಜಸ್ಸು ಮುಂತಾದ

ಹಲವಾರು ಅಪ್ರತಿಮ ಸದ್ಗುಣಗಳಿಂದ

ವಿಪ್ರವೃಂದದ ಸ್ನೇಹ ಸಂಪಾದಿಸಿರಲು

ವೇದನಾಯಕರಾದ ವ್ಯಾಸ ಮುನಿವರ್ಯರನು

ಏಕಾಂತದಲ್ಲೊಮ್ಮೆ ಸಂಧಿಸಿದರು
 
॥ ೧ ॥
 
"ಶ್ರೀ ಹರಿಯ ಮಹಿಮೆಗಳು ಸುವಿಶೇಷವಾದವು

ರುದ್ರಾದಿ ದೇವರಿಗೂ ತಿಳಿಯದಂತಹವು

ಇವುಗಳನ್ನು ಅರಿಯಲು ವಾಯುದೇವರೇ ಅರ್ಹ

ವ್ಯಾಸಮುನಿ ಮಧ್ವರ ಗುರು ಶಿಷ್ಯ ಸಂಬಂಧ

ಅತ್ಯಂತ ಉಚಿತ, ಅತ್ಯಂತ ಯೋಗ್ಯವು"

ಇಂತೆಂದು ಸ್ತುತಿಸಿದರು ದೇವತೆಗಳು
 
॥ ೨ ॥
 
ದ್ವಾರಕಾನಗರಿಯು ಸಕಲ ಐಸಿರಿ ಭೂಮಿ

ಶ್ರೀ ಕೃಷ್ಣ ಪರಮಾತ್ಮ ಆ ನಗರಿಯನ್ನು

ಮತ್ತಷ್ಟು ಸಿರಿಯಿಂದ ಸಮೃದ್ಧಗೊಳಿಸಿದನು

ಅಂತೆಯೇ ಈ ನಮ್ಮ ವಾಸಿಷ್ಠ-ಕೃಷ್ಣರು

ಜ್ಞಾನದೈಸಿರಿಯಿಂದ ಸಮೃದ್ಧಗೊಂಡಿದ್ದ

ಮಧ್ವರಿಗೆ ಜ್ಞಾನವನು ಮತ್ತಷ್ಟು ತುಂಬಿದರು
 
1
 
2
 
3
 
॥ ೩ ॥