This page has not been fully proofread.

ರುದ್ರಾದಿ ಸುರರಂಥ ಹರಿಯ ಸೇವಕರೆಲ್ಲ
ನಾಗದ ಬ್ರಹ್ಮನನು ಸೇವಿಸುವ ಪರಿಯಲ್ಲಿ
ವ್ಯಾಸ ಮುನಿ ಆಶ್ರಮದ ಶಿಷ್ಯರೆಲ್ಲರೂ ಕೂಡಿ
ಗುಲ್ವಾಜ್ಞೆ ಇಂಗಿತವನರಿತವರ ತೆರದಲ್ಲಿ
ಆನಂದ ತೀರ್ಥರಿಗೆ ಅನುರೂಪ ಆಸನವ
ಭಕ್ತಿ ಆದರವನ್ನು ತೋರುತ್ತ ನೀಡಿದರು
 
"ಕುಳಿತುಕೊಳ್ಳಿರಿ'' ಎಂದು ಎಲ್ಲರಿಗೂ ಸೂಚಿಸುತ
ಸತ್ಯವಾದಿಗಳಾದ ಆ ವ್ಯಾಸ ಮುನಿವರ್ಯರು
ಪೀಠಸ್ಥರಾದರು ಗಾಂಭೀರ್ಯದಿಂದ
ಆ ಬಳಿಕ ಆ ನಮ್ಮ ಆನಂದ ತೀರ್ಥರು
ಮುಗುಳು ನಗೆ ಸೂಸುತ್ತ, ದ್ವಿಜಗಣವ ನೋಡುತ್ತ
 
ಆಸಿನರಾದರು ಉಚಿತ ಆಸನದಿ
 
"ಆನಂದ ತೀರ್ಥರು ಎಮಗಿಂತ ಉತ್ತಮರು"
ಇಂತೆಂದು ಅರಿತಿದ್ದ ಆಶ್ರಮದ ಯತಿಗಣವು
ವಿಧಿ ವಿಧಾನಗಳನ್ನು ಉಚಿತದಲ್ಲಿ ಅನುಸರಿಸಿ
ಆಚಾರ್ಯವರ್ಯರನು ಆದರದಿ ಉಪಚರಿಸಿ,
 
ಶ್ರವಣ-ಮೋಹಕವಾದ ವ್ಯಾಸ - ಮಧ್ವರ ವಾಣಿ
ಮುದದಿಂದ ಆಲಿಸುತ ಸಂತಸವ ಪೊಂದಿದರು
 
ಸುಜ್ಞಾನ ನಿಧಿಗಳು ಶ್ರೀ ವೇದವ್ಯಾಸರು
ಸಾಕ್ಷಾತ್ತು ಶ್ರೀ ಹರಿಯ ದಿವ್ಯಾವತಾರವು
ಸಜ್ಜನಕೆ ತತ್ವವನು ಕರುಣಿಸಲು ಬಂದಿಹರು
ಆನಂದ ತೀರ್ಥರ ಹೆಸರನ್ನು ಹೊತ್ತು
 
ಧರೆಗಳಿದು ಬಂದಿಹರು ವಾಯುದೇವರು ಇಂದು
ಈ ಹರಿ-ವಾಯು ಮಿಲನವು ಆಶ್ರಮವ ಬೆಳಗಿತ್ತು
 
56
 
ಏಳನೆಯ ಸರ್ಗ / 121
 
57
 
58
 
59
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಏಳನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ