2023-02-26 12:35:57 by ambuda-bot
This page has not been fully proofread.
ಶ್ರೀ ವ್ಯಾಸ-ಮಧ್ವ ಸಮಾಗಮ
ಇಂತೆಂದು ಚಿಂತಿಸುತ ಆನಂದ ತೀರ್ಥರು
ಮೈಮನಗಳಲ್ಲೆಲ್ಲ ಶ್ರೀ ಹರಿಯ ಧ್ಯಾನಿಸುತ
ಬಾಹ್ಯಗತಿಯನು ಅವರು ತ್ವರಿತದಲ್ಲಿ ಕ್ರಮಿಸುತ್ತ
ವೇದಗಳ ಜನಕ ಶ್ರೀ ವ್ಯಾಸಮುನಿಗಳನು
ಹಿಂದೆ ಕಣ್ಣಲ್ಲಿ ಕಂಡು ಮುದಗೊಂಡಿದ್ದು
ಈಗವರ ನಿಜ ದೇಹ ಸಾಮೀಪ್ಯ ಪೊಂದಿದರು
ಗುರುಭಕ್ತಿ ಭಾವವದು ತುಂಬ ಗುರುತಮವಹುದು
ಇಂಥ ಗುರುಭಕ್ತಿಯ ಅತಿಶಯದ ಭಾರದಲಿ
ದೇಹವನು ಬಾಗಿಸಿದ ಆನಂದ ತೀರ್ಥರು
ಭಕುತಿಯಿಂದಲಿ ತಮ್ಮ ಎರಡು ಕೈಜೋಡಿಸುತ
ಕಣ್ಣರೆಪ್ಪೆಗಳನ್ನು ಅರೆತೆರೆದು ನೋಡುತ್ತ
ಪೂಜ್ಯ ಗುರುವರ್ಯರಿಗೆ ಸ್ತೋತ್ರವನು ಸಲ್ಲಿಸಿದರು
ಆನಂದ ತೀರ್ಥರಿಗೆ ವಿನಯವೇ ಆಭರಣವು
ಭವ್ಯ ಭೂಷಣವಹುದು ಆ ದಿವ್ಯ ಕಾಯಕ್ಕೆ
ಸಾಷ್ಟಾಂಗ ಕರ್ಮಗಳ ವಿಹಿತದಲಿ ಮಾಡುತ್ತ
ಪೂಜ್ಯರೆನಿಸಿದ ನಮ್ಮ ಆನಂದ ತೀರ್ಥರು
ವ್ಯಾಸಮುನಿಗಳ ಪಾದ ಪಂಕಜಗಳಲ್ಲಿ
ನಮಿಸಿದರು ಅತ್ಯಂತ ಭಕ್ತಿಪರವಶರಾಗಿ
ಪರಾಶರಾತ್ಮಜರು, ವ್ಯಾಸ ಭಗವಾನರು
ಇಳೆಯೊಳಗೆ ಇಳಿದಿರುವ ಶ್ರೀ ಹರಿಯೇ ಅವರು
ತಮ್ಮ ಪಾದಕೆ ಎರಗಿ ಸಾಷ್ಟಾಂಗ ನಮಿಸಿದ
ಆನಂದ ತೀರ್ಥರನ್ನು ಪ್ರೇಮದಿಂದಲಿ ಕಂಡು
ತಮ್ಮೆರಡು ಕೈಗಳನ್ನು ಪ್ರೀತಿಯಲ್ಲಿ ಚಾಚಿ
ಹಿಡಿದೆತ್ತಿ ನಿಲಿಸಿದರು ಪರಮ ವಾತ್ಸಲ್ಯದಲ್ಲಿ
ಏಳನೆಯ ಸರ್ಗ / 119
48
49
50
51
ಇಂತೆಂದು ಚಿಂತಿಸುತ ಆನಂದ ತೀರ್ಥರು
ಮೈಮನಗಳಲ್ಲೆಲ್ಲ ಶ್ರೀ ಹರಿಯ ಧ್ಯಾನಿಸುತ
ಬಾಹ್ಯಗತಿಯನು ಅವರು ತ್ವರಿತದಲ್ಲಿ ಕ್ರಮಿಸುತ್ತ
ವೇದಗಳ ಜನಕ ಶ್ರೀ ವ್ಯಾಸಮುನಿಗಳನು
ಹಿಂದೆ ಕಣ್ಣಲ್ಲಿ ಕಂಡು ಮುದಗೊಂಡಿದ್ದು
ಈಗವರ ನಿಜ ದೇಹ ಸಾಮೀಪ್ಯ ಪೊಂದಿದರು
ಗುರುಭಕ್ತಿ ಭಾವವದು ತುಂಬ ಗುರುತಮವಹುದು
ಇಂಥ ಗುರುಭಕ್ತಿಯ ಅತಿಶಯದ ಭಾರದಲಿ
ದೇಹವನು ಬಾಗಿಸಿದ ಆನಂದ ತೀರ್ಥರು
ಭಕುತಿಯಿಂದಲಿ ತಮ್ಮ ಎರಡು ಕೈಜೋಡಿಸುತ
ಕಣ್ಣರೆಪ್ಪೆಗಳನ್ನು ಅರೆತೆರೆದು ನೋಡುತ್ತ
ಪೂಜ್ಯ ಗುರುವರ್ಯರಿಗೆ ಸ್ತೋತ್ರವನು ಸಲ್ಲಿಸಿದರು
ಆನಂದ ತೀರ್ಥರಿಗೆ ವಿನಯವೇ ಆಭರಣವು
ಭವ್ಯ ಭೂಷಣವಹುದು ಆ ದಿವ್ಯ ಕಾಯಕ್ಕೆ
ಸಾಷ್ಟಾಂಗ ಕರ್ಮಗಳ ವಿಹಿತದಲಿ ಮಾಡುತ್ತ
ಪೂಜ್ಯರೆನಿಸಿದ ನಮ್ಮ ಆನಂದ ತೀರ್ಥರು
ವ್ಯಾಸಮುನಿಗಳ ಪಾದ ಪಂಕಜಗಳಲ್ಲಿ
ನಮಿಸಿದರು ಅತ್ಯಂತ ಭಕ್ತಿಪರವಶರಾಗಿ
ಪರಾಶರಾತ್ಮಜರು, ವ್ಯಾಸ ಭಗವಾನರು
ಇಳೆಯೊಳಗೆ ಇಳಿದಿರುವ ಶ್ರೀ ಹರಿಯೇ ಅವರು
ತಮ್ಮ ಪಾದಕೆ ಎರಗಿ ಸಾಷ್ಟಾಂಗ ನಮಿಸಿದ
ಆನಂದ ತೀರ್ಥರನ್ನು ಪ್ರೇಮದಿಂದಲಿ ಕಂಡು
ತಮ್ಮೆರಡು ಕೈಗಳನ್ನು ಪ್ರೀತಿಯಲ್ಲಿ ಚಾಚಿ
ಹಿಡಿದೆತ್ತಿ ನಿಲಿಸಿದರು ಪರಮ ವಾತ್ಸಲ್ಯದಲ್ಲಿ
ಏಳನೆಯ ಸರ್ಗ / 119
48
49
50
51