This page has been fully proofread once and needs a second look.

*" ಸರ್ವರೊಳು ಉತ್ತಮರು ಶ್ರೀ ವೇದವ್ಯಾಸರು
 

ಮೂರು ಲೋಕಕೂ ಅವರು ತಿಲಕದಂತಿಹರು
 

ಹಣೆಯಲ್ಲಿ ಕಂಗೊಳಿಪ ಆ ಭವ್ಯ ತಿಲಕವದು

ನೀಲಮಣಿ ಪರ್ವತದ ಶಿಖರದ ಮಧ್ಯದಲ್ಲಿ
ಲಿ
ಕಂಗೊಳಿಪ ಪದ್ಮಮಣಿ ಶಿಲೆಯ ಸಾಲಿನ ತೆರದಿ

ಸೂರೆಗೊಳುವುದು ಎಲ್ಲ ದರ್ಶಕರ ಮನವನ್ನು "
 
॥ ೪೪ ॥
 
ಮಿರಿಮಿರಿದು ಮಿಂಚುವಾ ಮಿಂಚ ಬಳ್ಳಿಗಳಿಂದ

ಮೋಹಗೊಳಿಸುವ ನೀಲ ಮೇಘ ಮಾಲೆಯ ತೆರದಿ
 

ನೀಲವರ್ಣದ ಕಾಯ, ಕೆಂಬಣ್ಣ ಜಟೆಯಿಂದ

ಶೋಭಿಸುತ ಮೆರೆದಿರುವ ಶ್ರೀ ವೇದವ್ಯಾಸರ

ಭವ್ಯ ದೇಹವ ಕಂಡು ಸಂತಸದಿ ಮುದಗೊಂಡು

ಧನ್ಯ ನಂನೆಂದೆಣಿಸಿದರು ಆನಂದ ತೀರ್ಥರು
 
॥ ೪೫ ॥
 
ಶ್ರೇಷ್ಠತಮ ದೇವತೆಯು ಶ್ರೀ ರಮಾ ದೇವಿಯು

ಹಗಲಿರುಳು ಶ್ರೀ ಹರಿಯ ಸನ್ನಿಧಿಯೊಳಿರ್ಪಳು

ಆ ಹರಿಯ ಕಾಲ್ಪೆಬೆರಳ ಉಗುರುಗಳ ಅಂಚಿನಲಿ

ನಲಿದು ಮೆರೆದಾಡುವ ಸಕಲ ಸದ್ಗುಣಗಳಲಿ
 

ಹಲವಾರು ಗುಣಗಳನ್ನು ಅರಿಯದಿಹಳಾಕೆ
 

ಇಂತಿರಲು, ಮತ್ತಿತರ ಪಾಮರರ ಪಾಡೇನು ?
 
4
 
॥ ೪೬ ॥
 
"ಭೂ, ಅಗ್ನಿ, ಜಲ, ವಾಯು, ಆಕಾಶ ಮುಂತಾದ

ಒಂಬತ್ತು ಆವರಣ ಕೂಡಿರುವ ಬ್ರಹ್ಮಾಂಡ

ಇದ ಕಾಂಬೆ, ಅನವರತ, ಆಶ್ಚರ್ಯ ವಿರದಂತೆ

ಆದರೀ ಸದ್ಗುರುವ ಅದ್ಭುತದ ಕಾಯವನು

ಕಂಡು ಈ ಪರಿಯಲ್ಲಿ ಅಚ್ಚರಿಯ ಹೊಂದಿರುವೆ

ಎಂಥದೀ ಸೋಜಿಗವು ? ಎಂಥ ಆಶ್ಚರ್ಯ !"
 
118/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೮ ॥