This page has not been fully proofread.

* ಸರ್ವರೊಳು ಉತ್ತಮರು ಶ್ರೀ ವೇದವ್ಯಾಸರು
 
ಮೂರು ಲೋಕಕೂ ಅವರು ತಿಲಕದಂತಿಹರು
 
ಹಣೆಯಲ್ಲಿ ಕಂಗೊಳಿಪ ಆ ಭವ್ಯ ತಿಲಕವದು
ನೀಲಮಣಿ ಪರ್ವತದ ಶಿಖರದ ಮಧ್ಯದಲ್ಲಿ
ಕಂಗೊಳಿಪ ಪದ್ಮಮಣಿ ಶಿಲೆಯ ಸಾಲಿನ ತೆರದಿ
ಸೂರೆಗೊಳುವುದು ಎಲ್ಲ ದರ್ಶಕರ ಮನವನ್ನು "
 
ಮಿರಿಮಿರಿದು ಮಿಂಚುವಾ ಮಿಂಚ ಬಳ್ಳಿಗಳಿಂದ
ಮೋಹಗೊಳಿಸುವ ನೀಲ ಮೇಘ ಮಾಲೆಯ ತೆರದಿ
 
ನೀಲವರ್ಣದ ಕಾಯ, ಕೆಂಬಣ್ಣ ಜಟೆಯಿಂದ
ಶೋಭಿಸುತ ಮೆರೆದಿರುವ ಶ್ರೀ ವೇದವ್ಯಾಸರ
ಭವ್ಯ ದೇಹವ ಕಂಡು ಸಂತಸದಿ ಮುದಗೊಂಡು
ಧನ್ಯ ನಂದೆಣಿಸಿದರು ಆನಂದ ತೀರ್ಥರು
 
ಶ್ರೇಷ್ಠತಮ ದೇವತೆಯು ಶ್ರೀ ರಮಾ ದೇವಿಯು
ಹಗಲಿರುಳು ಶ್ರೀ ಹರಿಯ ಸನ್ನಿಧಿಯೊಳಿರ್ಪಳು
ಆ ಹರಿಯ ಕಾಲ್ಪೆರಳ ಉಗುರುಗಳ ಅಂಚಿನಲಿ
ನಲಿದು ಮೆರೆದಾಡುವ ಸಕಲ ಸದ್ಗುಣಗಳಲಿ
 
ಹಲವಾರು ಗುಣಗಳನ್ನು ಅರಿಯದಿಹಳಾಕೆ
 
ಇಂತಿರಲು, ಮತ್ತಿತರ ಪಾಮರರ ಪಾಡೇನು ?
 
4
 
"ಭೂ, ಅಗ್ನಿ, ಜಲ, ವಾಯು, ಆಕಾಶ ಮುಂತಾದ
ಒಂಬತ್ತು ಆವರಣ ಕೂಡಿರುವ ಬ್ರಹ್ಮಾಂಡ
ಇದ ಕಾಂಬೆ, ಅನವರತ, ಆಶ್ಚರ್ಯ ವಿರದಂತೆ
ಆದರೀ ಸದ್ಗುರುವ ಅದ್ಭುತದ ಕಾಯವನು
ಕಂಡು ಈ ಪರಿಯಲ್ಲಿ ಅಚ್ಚರಿಯ ಹೊಂದಿರುವೆ
ಎಂಥದೀ ಸೋಜಿಗವು ? ಎಂಥ ಆಶ್ಚರ್ಯ !"
 
118/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47