This page has been fully proofread once and needs a second look.

ಆಶ್ರಮದ ದ್ವಿಜರಿಗೆ, ಪಂಡಿತೋತ್ತಮರಿಗೆ

ವೇದಗಳ ಗೌಪ್ಯವನ್ನು ಭೇದಿಸುವ ತವಕ

ನೀರ ಒರತೆಗೆ ಕಾಯ್ ಬಾವಿಗಳ ತರಹ

ಅವರ ಮನದಾಳದಲ್ಲಿ ಹತ್ತಾರು ಸಂದೇಹ

ನೂರಾರು ಪ್ರಶ್ನೆಗಳ ನೂರಾರು ಬಾವಿಗಳ

ಒಮ್ಮೆಲೇ ತುಂಬುವುದು ವ್ಯಾಸವಾಣಿಯ ಗಂಗೆ
 
॥ ೪೦ ॥
 
"ಕಣ್ಮನಕೆ ಮುದವೀವ ವ್ಯಾಸಮುನಿಗಳ ನೋಟ !

ಅವರ ಆ ನೇತ್ರಗಳು ಕಮಲ ಪುಷ್ಪಗಳಂತೆ

ಜಗಕೆಲ್ಲ ನೀಡುವುವು ಸಂತಸದ ಸುಧೆಯನ್ನು

ಮಂದಹಾಸವು ಬೆರೆತ ಆ ದಿವ್ಯ ನೋಟವದು

ಲಾಲಿಪುದು ಬರಸೆಳೆದು ಬಿಗಿಯ ಬಂಧನದಿಂದ

ಪೂರ್ಣಗೊಳಿಸುಪುದು ಎನ್ನ ಮನದ ಆಕಾಂಕ್ಷೆಯನು
 
॥ ೪೧ ॥
 
" ಎನ್ನ ಈ ಸ್ಥಾನವನ್ನು ಅಪಹರಿಪ ಸಂಚಿನಲಿ

ಕಮಲವೇ ಮೊದಲಾದ ಇತರ ಪುಷ್ಪಗಳೆಲ್ಲ

ಮತ್ಸರವ ಸೂಸುತ್ತ ಸನ್ನಾಹ ನಡೆಸಿವೆ

ಇಂತು ಶ್ರೀ ಹರಿಯಲ್ಲಿ ಮೊರೆ ಇಡುತಲಿಹುದೋ

ಎಂಬಂತೆ ತೋರುತಿದೆ ಆ ತುಲಸಿ ದಲವು

ಕಿವಿಗಳಲ್ಲಿ ಕಂಗೊಳಿಪ ಆ ಕರ್ಣ ಭೂಷಣವು
 
" ॥ ೪೨ ॥
 
"ಜಗಕೆಲ್ಲ ಒಡೆಯರು, ಶ್ರೀ ವೇದವ್ಯಾಸರು

ಅವರ ಆ ಭೂಭ್ರೂಲಾಸ್ಯ, ಎಂತಹ ಸ್ವಾರಸ್ಯ!

ಬ್ರಹ್ಮ ರುದ್ರರ ಸಹಿತ ಎಲ್ಲ ದೇವರ ಕ್ರಿಯೆಯು

ಸಕಲ ಜನ ಸಂಪದವು, ಉತ್ಪತ್ತಿ, ನಾಶವು

ಎಲ್ಲವೂ ಜರುಗುವುವು ಈ ಲಾಸ್ಯದಿಂದ

ಸಕಲ ಭುವನದ ಕಾರ್ಯಕಾರಣವು ಈ ಲಾಸ್ಯ
 
ಏಳನೆಯ ಸರ್ಗ / 117
 
40
 
41
 
42
 
43
 
" ॥ ೪೩ ॥