This page has been fully proofread once and needs a second look.

ಭಕುತರಿಗೆ ಅಭಯವನು ನೀಡುವಾ ಹಸ್ತಗಳು !
ಈ ಹಸ್ತಗಳಲಿಹವು ದಿವ್ಯ ಮುದ್ರೆಗಳು
ಬಲಗೈಯ ತುದಿಯಲ್ಲಿ ಜ್ಞಾನಮುದ್ರೆಯು ಇಹುದು
ಭಜಿಸುವರ ಅಜ್ಞಾನ ಬಡಿದೋಡಿಸುವುದು
ಮೊಣಕಾಲ ಮೇಲಿರುವ ಎಡಗೈಯ ತುದಿಯು
ಭವದ ಭಯ ಪರಿಹರಿಸಿ ಮುಕ್ತಿಯನು ಕರುಣಿಪುದು ॥ ೩
 
"ಗುರುಕಂಠದಲ್ಲಿರುವ ಮೂರು ವರರೇಖೆಗಳು
ಉತ್ತಮೋತ್ತಮವಾದ ಜ್ಞಾನ ಸಂಕೇತಗಳು
ಸರ್ವಕಾಲದಲೆಲ್ಲ ತಾವು ನಲಿದುಚ್ಚರಿಪ
ಮೂರು ವೇದಗಳ ಮಂತ್ರರಾಶಿಯೆಲ್ಲವೂ ಕೂಡಿ
ಸ್ಫುಟವಾದ ಅಂಕಿತವ ಪಡೆದಿವೆಯೋ ಎಂಬಂತೆ
ಕಂಗೊಳಿಸಿ<error> ಮರೆದಿಹವು</error><fix>ಮೆರೆದಿಹವು</fix> ಈ ಮೂರು ರೇಖೆಗಳು" ॥ ೩
 
"ದೇವ ವೃಂದಕೆ ಇವರು ಶಿಖೆಯ ಮಣಿಯಂತಿಹರು
ಆ ದಿವ್ಯ ವದನ, ಪ್ರಖರ ಕಾಂತಿಯ ಸದನ !
ಅಪರಿಮಿತ ಶೋಭೆಯಲಿ ಪರಿಶೋಭಿಸುತ್ತಿಹುದು
ಹದಿನಾರು ಅಕಲಂಕ ಕಲೆಗಳನು ಹೊಂದಿರುವ
ಶತಕೋಟಿ ಚಂದ್ರರಿಗೂ ಮಿಗಿಲಾದ ಕಾಂತಿ
ಎಂತು ಬಣ್ಣಿಪುದಿಂಥ ಅಪ್ರತಿಮ ತೇಜವನು ?" ॥ ೩
 
"ಚೆಲುವಾದ ಚೆಂದುಟಿಯು ನಯನ ಮೋಹಕವಹುದು
ಅರುಣ ರಾಗದಿ ಮೆರೆವ ಆ ಅಧರ ಯುಗ್ಮಗಳು !
ಮಾಮರದ ಹೊಸ ಚಿಗುರ ಪರಿಯಲಿಹವು
ಪದ್ಮರಾಗದ ಮಣಿಯ ತುಣುಕುಗಳ ನಡುವೆ
ಹೊಳೆವ ಮುತ್ತುಗಳ ಮಾಲೆಯನು ಕೂಡ
ನಾಚಿಸುವ ತೆರವಿಹವು ದಂತಪಂಕ್ತಿಗಳು" ॥ ೪೦ ॥
 
 
 
 
೩೯ ॥