This page has not been fully proofread.

"ಮಹಿಮರಾ ಉದರವು ಮತ್ತೊಂದು ಅದ್ಭುತವು
ಶೋಭಿಸುತ್ತಿಹುದಲ್ಲಿ ಶ್ರೇಷ್ಠತಮ ನಾಭಿಯು
ಅತಿ ನಿಮ್ನವೂ ಅಹುದು, ಅತಿ ತೆಳುವೂ ಅಹುದು
ಮೂರು ವಲಿಭಗಳುಂಟು ಅದರ ಮೇಲ್ಬಾಗದಲಿ
ಕಮಲನಾಭರು ನಮ್ಮ ವ್ಯಾಸಮುನಿವರ್ಯರು
ಬ್ರಹ್ಮಾಂಡ ಮಂಡಲವ ಉದರದಲಿ ಧರಿಸಿಹರು
 
"ಶ್ರೇಷ್ಠ ಮುನಿವಂಶದಲಿ ಜನಿಸಿಹರು ಇವರು
ಸಜ್ಜನರಿಗೆಂದೆಂದೂ ಅಭ್ಯುದಯ ಕರುಣಿಸುವರು
ವೇದಸ್ವರೂಪವೂ, ಪರಿಶುದ್ಧ ನಿರ್ಮಲವೂ
ಆಗಿರುವ ಎರಡು ವಿಧಿ ಬ್ರಹ್ಮಸೂತ್ರಗಳನ್ನು
ಹೃದಯದಲಿ ಧರಿಸಿಹರು ಈ ವ್ಯಾಸಮುನಿಗಳು
ಇವರ ಈ ಹೃದಯವು ಪರಮ ಪರಿಶುದ್ಧವು
 
"ಶ್ರೀ ಹರಿಗೆ ಸಮನಿಲ್ಲ, ಆತ ಸರ್ವೋತ್ತಮನೆಂದು
ಸಭೆಗಳಲ್ಲಿ ಸಾಧಿಸುತ ಡಿಂಡಿಮವ ಬಾರಿಸಿದ
ವ್ಯಾಸಮುನಿಗಳ ಕಂಡು ಆ ಬ್ರಹ್ಮದೇವರು
ದಿಗ್ವಿಜಯ ಸಾಧನೆಯ ಸಂಕೇತವಾಗಿ
ಕೋಟಿ ಸೂರರ ಪ್ರಭೆಯ ಪ್ರಖರ ಕಾಂತಿಯ ಪಡೆದ
ಕೌಸ್ತುಭ ವೆಂಬೊಂದು ಅಡಿಕೆಯ ನೀಡಿಹರು
 
"ವೇದವ್ಯಾಸರ ಹಸ್ತ ಲೋಕದೊಳು ಅನುಪಮ
ರಂಜಿಸುತ್ತಿಹವು ಅವು ಅರುಣರಾಗದೊಳು
ಶಂಖ ಚಕ್ರಾಂಕಿತದಿ ಶೋಭಿಸುತ್ತಿಹವು
ಅತ್ಯಂತ ಮೋಹಕವು, ತುಂಬ ಕೋಮಲವು
ದುಂಡು ೦ಡಾಗಿರುವ ಪುಷ್ಟ ಹಸ್ತಗಳು
ಕಾಣಲಾರೆವು ಇವಕೆ ಮತ್ತೊಂದು ಹೋಲಿಕೆಯ
 
ಏಳನೆಯ ಸರ್ಗ । 115
 
32
 
33
 
34
 
35