This page has not been fully proofread.

"ಕಾಲ್ಪೆರಳ ಸೌಂದರ್ಯ ಮತ್ತಷ್ಟು ರಮಣೀಯ !
ಕೋಮಲತೆಯೇ ಮೈವೆತ್ತಿ ಬಂದಂಥ ಬೆರಳುಗಳು !
ಮರೆಯಲ್ಲಿ ಅಡಗಿರುವ ಆ ದಿವ್ಯ ಹರಡಿಗಳು !
ಶ್ರೀ ವೇದವ್ಯಾಸರ ಈ ಎರಡು ಚರಣಗಳು
ಒಂದಕ್ಕೆ ಮತ್ತೊಂದು ಉಪಮಾನವೇ ಹೊರತು
 
ಬೇರೊಂದು ಉಪಮಾನ ಕವಿಗಳಿಗೆ ಹೊಳೆಯದು
 
"ಶ್ರೀ ವೇದವ್ಯಾಸರ ಆ ಯುಗಲ ಜಂಘಗಳು
ಪರಿಶುದ್ಧ, ನಿರ್ಮಲ, ಉತ್ತಮೋತ್ತಮವಹುದು
 
ದುಂಡು ದುಂಡಾಗಿರುವ ಈ ಜೋಡಿ ಕಣಗಾಲು
 
ಗಾತ್ರದಲ್ಲಿ ಸುಸ್ಕೂಲ, ಮೋಹಕವು, ರಮ್ಯವು
ಆ ದೇವ ದೇವನಿಗೆ ಉಚಿತವಹ ಅಂಗಗಳು
ಭಜಿಪ ಭಕುತರಿಗೆಲ್ಲ ಸಾರೂಪ್ಯ ನೀಡುವುವು
 
"ಮೊರೆ ಹೊಕ್ಕ ಭಕ್ತರಿಗೆ ಸರ್ವಷ್ಟ ಕರುಣಿಸುವ
ಶ್ರೀ ಹರಿಯ ಬಳಸಿಹುದು ಯೋಗ ಪಟ್ಟಿಕೆಯೊಂದು !
ಅಚಲ ಆಸನಕಿದುವು ಉಚಿತವಾಗಿಹುದು
ಸ್ಥಿರವಾಗಿ ಕುಳಿತಿರಲು ಪರಮ ಸಾಧನವಹುದು
ಧನ್ಯತೆಯ ಪಡೆದಿಹುದು ಈ ಯೋಗ ಪಟ್ಟಿಕೆಯು
ಇಂತು ಚಿಂತಿಸುತಿಹುದು ಎನ್ನ ಮತಿಯು
 
"ಪರಮ ಪುರುಪೋತ್ತಮರು ಶ್ರೀ ವೇದವ್ಯಾಸರು
 
ಅವರ ಆ ಜಘನಗಳು ಪರಮ ಪಾವನವಹುದು
ಅವುಗಳನ್ನು ಬಳಿಸಿರುವ ಆ ಚರ್ಮದಂಬರವು
ವೀಕ್ಷಕರ ಕಣ್ಮನವ ಸೆಳೆಯುತ್ತಲಿಹುದು
ಸೂರ್ಯನಾ ಜಾಜ್ವಲ್ಯ ಪ್ರಖರತೆಯ ತೆರದಲ್ಲಿ
 
ಅಪರಿಮಿತ ಕಾಂತಿಯನು ಸೂಸುತಲಿಹುದು
 
114 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31