This page has not been fully proofread.

ಶ್ರೀ ಮಹಾಭಾರತವು ಪಾರಿಜಾತದ ತೆರದಿ,
ಪುರಾಣೇತಿಹಾಸಗಳು ಚಂದ್ರಮನ ಪರಿಯಂತೆ
ಕ್ಷೀರಸಾಗರ ಮಥನ ಸಮಯದಲ್ಲಿ ಅಂದು
ಪಾರಿಜಾತದ ಬಳಿಕ ಚಂದ್ರಮನು ಬಂದಂತೆ
ಅಂತ್ಯದಲ್ಲಿ ಅಮೃತದ ಕಲಶವು ದೊರೆತಂತೆ
ವ್ಯಾಸಮುಖಮಂಡಲದಿ ಬ್ರಹ್ಮಸೂತ್ರಗಳುದಯ !
 
"ಬ್ರಹ್ಮ ಸೂತ್ರದ ಭಾಷೆ ತುಂಬ ರಮಣೀಯ
ದಿವ್ಯ ಸೌಂದರ್ಯದ ವಚನ ಗಾಂಭೀರ್ಯ
ಇಂಥ ವಚನಗಳಿಂದ ಭೂಷಿತರು ವ್ಯಾಸರು
ಪಾಂಡುಪುತ್ರರ ಪರಿಯ ಸಜ್ಜನಕೆ ಕೃಪೆದೋರಿ
ತತ್ವಜ್ಞಾನವನೆಲ್ಲ ಪೋಷಿಸುವ ಸಲುವಾಗಿ
ಭೂಲೋಕದಲ್ಲೆಲ್ಲ ಬಹುಕಾಲ ಚರಿಸಿದರು
 
"ಶ್ರೀ ವೇದವ್ಯಾಸರು ಷಡ್ಗುಣ ಪ್ರಪೂರ್ಣರು
ಸಕಲ ಐಸಿರಿಯಿಂದ ಸಂಪನ್ನರವರು
ರಜನಿ ಆಗಸದಲ್ಲಿ ಐತರಲು ಅನುವಾಗಿ
 
ಆ ರವಿಯು ಮರೆಯಾಗಿ ಹಿಂದೆ ಸರಿಯುವ ತೆರದಿ
 
ಪಾಮರರ ಕಂಗಳಿಗೆ ಗೋಚರಿಸದಂತೆ
 
ಬದರಿಕಾಶ್ರಮದಲ್ಲಿ ನೆಲೆಸಿದರು ಅವರು
 
"ಪರಮ ಕೃಷ್ಣಾಜಿನದ ಯೋಗಪೀಠದ ಮೇಲೆ
ಆಸೀನರಾಗಿರ್ದು ಕಂಗೊಳಿಸಿ ಮೆರೆದಿರುವ
ವ್ಯಾಸಮುನಿಗಳ ಕಾಯ ವಿಜೃಂಭಿಸುತ್ತಿಹುದು
ಫುಲ್ಲ ಕುಸುಮಿತ ನೀಲ ಕಮಲಪುಷ್ಪದ ತೆರದಿ
ರಮಣೀಯ ಕಾಂತಿಯನು ಸೂಸುವಾ ಕಾಯ !
ಎನ್ನ ಮನ, ನಯನಗಳಿಗಾನಂದ ತುಂಬಿಹುದು.
 
112 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23