This page has been fully proofread once and needs a second look.

ಶ್ರೀ ವೇದವ್ಯಾಸ ವರ್ಣನ
 

 
ಶ್ರೀ ಹರಿಯ ಮತ್ತೊಂದು ಪ್ರಾಕೃತದ ರೂಪದಲಿ

ಮೂರ್ಲೋಕ ಮಂಡಲಕೆ ಲೋಕಭೂಷಣರಾಗಿ

ಸತ್ಯವತೀ ಸುತನಾಗಿ, ಇಳೆಯಲ್ಲಿ ಅವತರಿಸಿ

ಬದರಿಕಾಶ್ರಮದಲ್ಲಿ ಮುನಿನಿವಹ ಮಧ್ಯದಲಿ

ಕಂಗೊಳಿಸಿ ಮೆರೆದಿದ್ದ ವ್ಯಾಸಮುನಿವರ್ಯರನೂ

ಪರಿಪೂರ್ಣ ಪ್ರಮತಿ, ಆ ಮಧ್ವಮುನಿ ಕಂಡರು
 
॥ ೧೬ ॥
 
ಪರಿಶುದ್ಧ ಚಿತ್ವನು ಪೊಂದಿಹರು ಮಧ್ವರು

ತಮ್ಮ ಹೃತ್ಕಮಲದಲಿ ಆಚಾರ್ಯವರ್ಯರು

ಸರ್ವದಾ ಕಾಣುವರು ವ್ಯಾಸಮುನಿಗಳನು
ಆ ಸುರೋತ್ತಮರ
ನ್ನು
ಆ ಸುರೋತ್ತಮರನ್ನು
ಅಡಿಗಡಿಗೆ ಕಾಣುತ್ತ

ನಿತ್ಯ ನೂತನವೆಂದು ದರುಶನವ ಎಣಿಸುತ್ತ

ಅಚ್ಚರಿಯಲಿಂತೆಂದು ಆಲೋಚಿಸಿದರು
 
॥ ೧೭ ॥
 
"
 
*
ಅಗಣ್ಯ ಗುಣಗಳಿಗೆ ಸಾಗರರು ಇವರು

ಪರಬೊಮ್ಮನಾಣತಿಗೆ ಅನುಸಾರವಾಗಿ

ಮುನಿ ಪರಾಶರರಿಂದ ಸತ್ಯವತಿ ಗರ್ಭದಲ್ಲಿ
ಲಿ
ಜನಿಸಿ ಬಂದಿಹರಿವರು ಶ್ರೀ ವೇದವ್ಯಾಸರು
 

ಅಕಳಂಕ ವಾರಿಧಿಯು ಸರ್ವಗುಣ ನಿಧಿಯು
 

ಇವರೀಗ ಸಾಕ್ಷಾತ್ತು ಶ್ರೀ ಹರಿಯೇ ಅಲ್ಲವೆ ?''
 
॥ ೧೮ ॥
 
"ಕಾರುಣ್ಯ ವೆಂಬೊಂದು ಮಂದರಾದ್ರಿಯು ಕಡೆದ

ಸಜ್ಜನರ ಮನಸೆಂಬ ಪಾಲ್ಗಡಲಿನಲ್ಲಿ

ಶೃತಿರೂಪ ಶ್ರೀ ಹರಿಯ ಹೃತ್ಕಮಲವಾಸಿನಿ

ಪರಮ ಲಾವಣ್ಯವತಿ, ಪರಮ ಸೌಂದರ್ಯವತಿ

ಸಕಲ ಸಿರಿದಾಯಿನಿ ಶ್ರೀ ರಮಾ ದೇವಿಯು

ಪ್ರಕಟಗೊಂಡಳು ದಿವ್ಯ ಸುಮುಹೂರ್ತದಲ್ಲಿ
 
ಏಳನೆಯ ಸರ್ಗ / 111
 
16
 
17
 
18
 
19
 
॥ ೧೯ ॥