This page has not been fully proofread.

"ಆ ಕಮಂಡಲು, ಆ ಯೋಗದಂಡ!
ಸನ್ಯಾಸ ದೀಕ್ಷೆಯ ಜಾಜ್ವಲ್ಯ ಕುರುಹುಗಳು !
ಈ ತೇಜಸ್ವಿ ಯಾರೆಂದು ಅರಿಯಲಾರೆವು ನಾವು
ಅಪ್ರತಿಮ ಧೀಶಕ್ತಿ ಇವರದಾಗಿಹುದು
ಮನುಜರೂಪದಲಿರುವ ಈ ಯತಿಶ್ರೇಷ್ಠರು
ನಮಗೆಲ್ಲ ವಿಸ್ಮಯವನುಂಟು ಮಾಡುತಲಿಹರು "
 
ಶೃತಿನಾಥನೆಂದೆನಿಸಿ ಖ್ಯಾತಿಯನ್ನು ಪಡೆದಿರುವ
ವ್ಯಾಸಮುನಿಗಳ ಕಾಂಬ ಹಂಬಲವ ತೋರುತ್ತ
ಬರುತಿರ್ಪ ಈ ದಿವ್ಯ ಯತಿವರ್ಯರನು ಕಂಡು
ಪವನ, ಚತುರಾನನರೇ ಬರುತಿರ್ಪರೋ ಎಂದು
 
ಸಂಶಯವ ತಳೆಯುತ್ತ ಆಶ್ರಮದ ವಾಸಿಗಳು
ಬೆರಗುಗೊಂಡರು ಆಗ ಅಪರಿಚಿತರನು ಕಂಡು
 
ಬದರೀ ವೃಕ್ಷವರ್ಣನ
ಅಪರಿಚಿತರಾಗಮನ ವಿಸ್ಮಯವ ಮೂಡಿಸಿತು
ಬ್ರಾಹ್ಮಣ ಶ್ರೇಷ್ಠರಲಿ ಕೌತುಕವು ಮೂಡಿತ್ತು
ಅಪರಿಚಿತನ ಅಂಗಾಂಗ ಸೌಷ್ಠವವ ಕಂಡು
ಸೂಕ್ಷ್ಮ ವಿಶ್ಲೇಷಣೆಯ ಮಾಡತೊಡಗಿದರವರು
ಮಧ್ವಮುನಿಗಳು ಆಗ ತ್ವರಿತಗತಿಯಲ್ಲಿ ನಡೆದು
ದೇವ ಪಾದಪದಂಥ ತರುವೊಂದ ಕಂಡರು
 
ನುಣುಪಾದ ತ್ವಚೆಯುಳ್ಳ ಉತ್ತುಂಗ ವೃಕ್ಷವದು
ರತ್ನದಂತಹ ಹೂವು ಎಲ್ಲೆಡೆಯೂ ಹರಡಿತ್ತು
ಶಾಖೋಪಶಾಖೆಗಳು ವೃಕ್ಷವನ್ನು ಆವರಿಸಿ
ಪನ್ನಗನ ಫಣಿಯಂತೆ ಕಂಗೊಳಿಸಿ ಮೆರೆದಿತ್ತು
ಪರಮಾತ್ಮ ಶ್ರೀ ಹರಿಯ ಸೇವೆಗೋ ಎಂಬಂತೆ
ಶೇಷ ದೇವರೇ ಅಲ್ಲಿ ನೆಲೆಸಿದಂತಿತ್ತು
 
ಏಳನೆಯ ಸರ್ಗ / 109
 
8
 
9
 
10
 
11