This page has been fully proofread once and needs a second look.

ಅಚ್ಯುತನ ಆಲಯ, ವೈಕುಂಠದಂತೆ

ವೈಭವದಿ ಮೆರೆದಿತ್ತು ಬದರಿಕಾಶ್ರಮವು

ಎಲ್ಲೆಲ್ಲೂ ನೆರೆದಿರುವ ಭೂಸುರರ ಗಡಣ!

ಸಕಲ ಮನದಭಿಲಾಶೆ ಪೂರೈಸುವಾ ತಾಣ!

ದ್ವೇಷ ಮತ್ಸರವನ್ನು ಕಿತ್ತೆಸೆದ ಸಜ್ಜನರು !

ಅಲ್ಪರಿಗೆ ದುರ್ಗಮವು ಈ ರಮ್ಯ ತಾಣ!
 
॥ ೪ ॥
 
ಶ್ರೀ ಮಧ್ವರ ವ್ಯಾಸಾಶ್ರಮ ಪ್ರವೇಶ, ಶ್ರೀ ಮಧ್ವ ವರ್ಣನ
 

 
ಭೂಲೋಕದಲ್ಲಿಲೆ ಪರಮ ಪಾವನ ಕ್ಷೇತ್ರ!

ಅತ್ಯಂತ ಆನಂದ, ಭಕ್ತಿಯಲಿ ನಲಿಯುತ್ತ

ಆಶ್ರಮವ ಹೊಕ್ಕರು ಆನಂದ ತೀರ್ಥರು

ಮೂವತ್ತು ಮತ್ತೆರಡು ಲಕ್ಷಣಗಳಿಂದ

ಕಂಗೊಳಿಸಿ ಮೆರೆದಿದ್ದ ಆಚಾರ್ಯ ಮಧ್ವರನು

ಕಂಡ ಆ ಬ್ರಾಹ್ಮಣರು ಚಿಂತಿಸಿದರಿಂತೆಂದು
 
॥ ೫ ॥
 
"ಯಾರಿವರು ಈ ವ್ಯಕ್ತಿ? ಎಂಥ ಸಲ್ಲಕ್ಷಣವು !

ಕನಕದಿಂದಾಕುಲಿತ ತಾಲವೃಕ್ಷದ ನಿಲುವು !

ಕಮಲಪುಷ್ಪದ ಪರಿಯ ಆ ಬೊಗಸೆಗಂಗಳು !

ಪೂರ್ಣಚಂದ್ರನ ತೆರದ ಆ ಮುಖದ ವರ್ಚಸ್ಸು !

ಗಜರಾಜನ ಪರಿಯ ಗಂಭೀರ ನಡಿಗೆಯದು !

ಯಾರು ಇರಬಹುದಿವರು ? ಇಲ್ಲಿ ಬಂದವರು ?
 
॥ ೬ ॥
 
"ಅತಿ ಶಾಂತ ಕಾಯವನು ಪಡೆದಿಹನು ಚಂದ್ರಮನು

ರಾತ್ರಿಯಲ್ಲಿ ಮಾತ್ರವೇ ಬೆಳಗುವನು ಅವನು

ಹಾಗಿದ್ದರಿವರು ಚಂದ್ರಮನು ಅಲ್ಲ

ಹಗಲಿನಲಿ ಪ್ರಜ್ವಲಿಪ ಸೂರ್ಯನೂ ಇವರಲ್ಲ

ಪ್ರಖರ ತಾಪದ ಸುಳಿವು ಇವರೊಳಿಲ್ಲ

ಉಪಮಾನವಿಲ್ಲದಿಹ ಸದ್ಗುಣಾರ್ಣವರಿವರು !
 
108 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7
 
॥ ೭ ॥