This page has been fully proofread once and needs a second look.

ವೃಷಭರಾಜನ ತೆರದಿ ಬಾಹುಬಲ ಸಿರಿಯು

ಅರಳಿದ ಕಣ್ಣುಗಳು ; ಭಯವನರಿಯದ ಧೀರ

ಇಂಥ ಜೀವೋತ್ತಮರು, ಆನಂದ ತೀರ್ಥರು

ವ್ಯಾಘ್ರ ಕೇಸರಿಯಂಥ ಪ್ರಾಣಿಗಳ ಬೀಡಾದ

ಖಗ, ಸರ್ಪ, ವಿಷಜಂತುಗಳಿಗೆಲ್ಲ ನೆಲೆಯಾದ

ಹಿಮಗಿರಿಯ ಕಂಡರು, ಆನಂದ ತೀರ್ಥರು
 
॥ ೫೫ ॥
 
ಹಿಮಗಿರಿಯ ನೋಡುತ್ತ ಆನಂದ ಹೊಂದುತ್ತ

ಆ ಸಿರಿಯ ಕರಗಳಿಂದಪ್ಪುಗೆಯ ಪಡೆದವನ

ಸಜ್ಜನರ ಹಿತಕಾಗಿ ಶೇಷಶಯ್ಕೆಯೆಯೊಳಿರುವ

ಉಲ್ಲಸಿತ ಮನಸಿನ ದೇವವೃಂದದ ನಡುವೆ

ರತ್ನಮಯ ಪೀಠದ ಮಧ್ಯದಲ್ಲಿ ಶೋಭಿಸುವ

ರಮಣೀಯ ಮೂರ್ತಿಯನು ಮನದಲ್ಲಿ ಸ್ಮರಿಸಿದರು
 
॥ ೫೬ ॥
 
ಅಡಿಗಡಿಗೆ ಅಡಿಗಳಿಗೆ ನಮಿಸುವ ಯತಿಗಡಣ
 

ಚಿನ್ನದಂದದಿ ಹೊಳೆವ ಪೀತವರ್ಣ ದುಕೂಲ

ವಿವಿಧ ರತ್ನಾಭರಣ, ಹೊನ್ನ ಕಡಗಗಳು
 

ಕಂಗೊಳಿಪ ವನಮಾಲೆ ರಮಣೀಯ ಕಾಂತಿ
 

ಆನಂದ ಮುಂತಾದ ಸದ್ಗುಣವೇ ದೇಹ

ಇಂಥ ಶ್ರೀ ಹರಿಯನ್ನು ಸ್ಮರಿಸಿ ಕೊಂಡಾಡಿದರು
 
55
 
ಆರನೆಯ ಸರ್ಗ / 103
 
56
 
57
 
॥ ೫೭ ॥
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ

ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ

ಆನಂದಾಂಕಿತ ಆರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.