This page has been fully proofread once and needs a second look.

ಶ್ರೀ ಮಧ್ವಾಚಾರ್ಯರ ಅಪೂರ್ವ ಮಹಿ
ಮೆ
 
ದುರ್ಗ ಮಾರ್ಗವು ತುಂಬ ದುರ್ಗಮವು, ದುಸ್ತರವು

ಹಾದಿಯಲಿ ಅತಿ ದೊಡ್ಡ ಹೆಬ್ಬಂಡೆ ಇಹವು

ಇಂಥ ಮಾರ್ಗದಿ ನಮ್ಮ ಆನಂದ ತೀರ್ಥರು

ವೇಗದಲಿ ಕ್ರಮಿಸಿದರು ಪವನಪುತ್ರನ ತೆರದಿ

ಸತ್ಯತೀರ್ಥರು ನಡೆದು ಆಚಾರ್ಯರ ಹಿಂದೆ

ಸಂಜೆಯಾದರೂ ಅವರು ಸಂಧಿಸಲೇ ಇಲ್ಲ
 
॥ ೫೧ ॥
 
ಮನದಲ್ಲಿಲೆ ಅಂಜಿದರು ಶ್ರೀ ಸತ್ಯತೀರ್ಥರು

ಹಿಂದಿರುಗಿ ನೋಡಿದರು ಆನಂದ ತೀರ್ಥರು
 

ಶಿಷ್ಯನಾ ಬವಣೆಯನ್ನು ಕ್ಷಣದಲ್ಲಿ ಅರಿತರು

ಕೈಸನ್ನೆಯಿಂದಲೇ "ಹಿಂದಿರುಗು" ಎಂದರು

ದಿನವಿಡೀ ಸಾಗಿದ ಹಾದಿಯೆಲ್ಲವನವರು

ಕ್ಷಣದಲ್ಲಿಲೆ ಕ್ರಮಿಸುತ್ತ ಆಶ್ರಮಕೆ ಮರಳಿದರು
 
॥ ೫೨ ॥
 
ಆಶ್ರಮದಿ ನಿಜಜನರ ಕಂಡರಾ ಯತಿಗಳು

ಗುರುಮಧ್ವ ಸಾಹಸವ ಬೆರಗಾಗಿ ಹೇಳಿದರು
 

ಹೆಬ್ಬಂಡೆಗಳ ಮೇಲೆ ಹಾರುವಾ ವೈಖರಿ!

ಗಿರಿಶಿಖರಗಳನೇರಿ ಇಳಿಯುವಾ ರೀತಿ !

ಆಚಾರ್ಯ ಮಹಿಮೆಯನು ವಿಧವಿಧದಿ ಬಣ್ಣಿಸುತ

ಸತ್ಯತೀರ್ಥರ ಮನವು ಮೈದುಂಬಿ ಬಂತು
 
॥ ೫೩ ॥
 
ಮಹಾಮಹಿಮರ ಹಿಮಾಲಯ ಸಂಚಾರ
 

 
ಹಿಮಗಿರಿಯ ಶೃಂಗದಲ್ಲಿ ಹಾರುತ್ತ ನಡೆದ,

ಪಾಪಗಳನೆಲ್ಲವನೂ ಪರಿಹರಿಸುವಂತಹ

ಪುಣ್ಯನಾಮರು ನಮ್ಮ ಆನಂದ ತೀರ್ಥರು

ಹಿಂದೊಮ್ಮೆ ಹನುಮಂತ ಜಲಧಿ ಹಾರಿದ ತೆರದಿ

ದಾನವರ ಧ್ವಂಸಿಸಿದ ಭೀಮಸೇನನ ತೆರದಿ

ಕಂಗೊಳಿಸಿ ಮೆರೆದರಾ ಆನಂದ ತೀರ್ಥರು
 
102 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
51
 
52
 
53
 
54
 
॥ ೫೪ ॥