This page has been fully proofread once and needs a second look.

ಬದರಿಗೆ ತೆರಳುವ ಸೂಚ
 
ನೆ
 
"ಭಗವಂತನಿಹನಲ್ಲಿ, ವ್ಯಾಸರೂಪದಲಿ

ತೆರಳುವೆವು ನಾವಲ್ಲಿ ದರುಶನದ ಬಯಕೆಯಲಿ

ಮರಳಿ ಬರುವೆವೊ ಮತ್ತೆ ಹೇಳಲಾರೆವು ನಾವು

ಯಾರು ಬಲ್ಲರು ಇದನ ? ಅವನ ಹೊರತು ?

ಶ್ರೀ ಹರಿಯು ನಿಮಗೆಲ್ಲ ಮಂಗಳವ ನೀಡಲಿ"

ಎಂದೆನುತ ಬರೆದಿಟ್ಟು ಮುಗಿಸಿದರು ಮಧ್ವರು
 
॥ ೪೮ ॥
 
ಶಿಷ್ಯರ ಆತಂಕ
 

 
"ಓ ಸ್ವಾಮಿ, ಮಧ್ವರೇ ! ಆಚಾರ್ಯ ಪುಂಗವರೇ !

ನೀವೆಮಗೆ ಪೂಜ್ಯರು ನೀವೆಮಗೆ ಓಡೆಯರು

ಈ ಪರಿಯಲೆಮ್ಮನ್ನು ತೊರೆದು ತೆರಳದಿರಿ"

ಇಂತು ಆಚಾರ್ಯರನು ಪ್ರಾರ್ಥಿಸಲು ಬಯಸಿದರು

ಗುರುಗಳಭಿಮತಕಿದುವು ಯೋಗ್ಯವಲ್ಲಂದೆಣಿಸಿ

ಶಿಷ್ಯಗಣ ಕಡುಮೌನ ತಳೆದರಾಗ
 
॥ ೪೯ ॥
 
ಸತ್ಯತೀರ್ಥರ ಗುರುಭಕ್ತಿ
 

 
ಶ್ರೀ ಸತ್ಯತೀರ್ಥರು ಮಧ್ವ ಶಿಷೋಷ್ಯೋತ್ತಮರು

ಆಚಾರ್ಯ ಮುಖದಿಂದ ಐತರೇಯದ ಅರ್ಥ

ಶ್ರವಣ ಮಾಡಿದರವರು ಮೂರು ಬಾರಿ

ಆಚಾರ್ಯರಗಲಿಕೆಯ ದುಃಖವನ್ನು ತಾಳದೆ

ಗುರುಗಳಿಲ್ಲದ ಬಾಳ ಸಹಿಸಿಕೊಳ್ಳಲಾರದೆ

ಗುರುಮಧ್ವರಾ ಹಿಂದೆ ತಾವು ಸಹ ನಡೆದರು
 
ಆರನೆಯ ಸರ್ಗ / 101
 
48
 
49
 
50
 
॥ ೫೦ ॥