This page has been fully proofread once and needs a second look.

ಕಾಷ್ಠಮೌನ ವ್ರತ
 

 
ಆಚಾರ್ಯ ಮಧ್ವರು ಪರಿಶುದ್ಧ ಚಿತ್ತರು

ಸಹಜವಾಗಿಯೇ ಅವರು ಶುದ್ಧಾಂತಃ ಕರಣರು

ಎಂದೆಂದೂ ಶ್ರೀ ಹರಿಯ ಕರುಣೆಯನ್ನು ಪಡೆದವರು

ದೈವಾನುಗ್ರಹವನ್ನು ಮತ್ತಷ್ಟು ಆರ್ಜಿಸಲು
 

"ಅನಂತ ಮಠ" ವೆಂಬ ಮಂದಿರದಿ ನೆಲೆಸಿದರು
 

ಶ್ರದ್ಧೆಯಲ್ಲಿ ನಡೆಸಿದರು ಮೌನೋಪವಾಸವನು
 
॥ ೪೪ ॥
 
ವೇದವ್ಯಾಸರಿಂದ ಉತ್ತರ ಬದರಿಗೆ ಆಹ್ವಾನ
 

 
ಈ ಪರಿಯ ವ್ರತಗಳನ್ನು ಒಂದು ಮಂಡಲ ಪೂರ್ತಿ

ಶ್ರದ್ಧೆ ಭಕ್ತಿಯ ಸಹಿತ ಸಾವಧಾನದಿ ಮಾಡಿ

ಹರಿಚರಣ ಸೇವೆಯಲಿ ಮೈಮನವ ಮರೆತರು

ಪರಮ ಸಂತುಷ್ಟನು, ಶ್ರೀ ಹರಿಯು ಇದರಿಂದ

ಅನ್ಯರಿಗೆ ದೀಪ್ತಿಯ ದೃಷ್ಟಿ ಗೋಚರ ಮಾತ್ರ

ಮಧ್ವರಿಗೆ ಸನ್ನಿಧಿಗೆ ಬರಲು ಆಹ್ವಾನ!
 
॥ ೪೫ ॥
 
ಇಂತು ಆಮಂತ್ರಿಸಿದ ವ್ಯಾಸರೂಪಿ ಹರಿಯು

ತೆರಳಿದನು ಆಶ್ರಮಕೆ ನಡುರಾತ್ರಿಯಲ್ಲಿ
ಲೆ
ಪರಮಾತ್ಮನಾಣತಿಯ ಮನದಲ್ಲಿಲೆ ನೆನೆಯುತ್ತ

ಮೂರನೆಯ ದಿನದಲ್ಲಿ ಸೂರ್ಯನುದಿಸಿದ ಬಳಿಕ

ಶಿಷ್ಯರೆಲ್ಲರಕರೆದು ಆನಂದ ತೀರ್ಥರು
 

ಲಿಖಿತ ಸಂದೇಶವನು ಬರೆದು ತೋರಿದರು
 
॥ ೪೬ ॥
 
ಶ್ರೀ ಮಧ್ವ ಸಂದೇಶ
 

 
"ಬದರಿಕಾಶ್ರಮದಂಥ ಸ್ಥಳವು ಬೇರೊಂದಿಲ್ಲ

ವಿಷ್ಣು ಪದಿಯಂದದ ತೀರ್ಥ ಮತ್ತೊಂದಿಲ್ಲ

ಶ್ರೀ ಹರಿಗೆ ಸಮನಾದ ದೇವರೇ ಇಲ್ಲ

ನಾವು ಬೋಧಿಪ ಶಾಸ್ತ್ರವೇದ ಸಮ್ಮತ ಶಾಸ್ತ್ರ

ಇದಕಿಲ್ಲ ಸಮನಾದ ಮತ್ತೊಂದು ಶಾಸ್ತ್ರ"

ಎಂಬ ಮಧ್ವರ ನುಡಿಗೆ ಪೂತರಾದರು ಮಂದಿ
 
100 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥