This page has been fully proofread once and needs a second look.

"ಗೀತೆಯಲ್ಲಿ ಹಲವಾರು ಸೂಕ್ಷ್ಮ ಅರ್ಥಗಳುಂಟು

ಎಲ್ಲ ಅರ್ಥಗಳನ್ನು ಹೇಳ ಬಲ್ಲಿರಿ ನೀವು

ಆದರೀ ಅರ್ಥಗಳ ಭಾಷ್ಯದಲ್ಲಿ ಬರೆದಿಲ್ಲ

"ಶಕ್ತಿತಃ" ಎಂಬುದಕೆ ಪಠ್ರ್ಯಾಯವಾಗಿ

"ಲೇಶತಃ" ಎಂಬ ಪದ ಬಳಸಿ ಬರೆಯಿರಿ ನೀವು"
 

ಇಂತು ಆಣತಿಯಿತ್ತ ಬದರಿನಾರಾಯಣ
 
॥ ೪೦ ॥
 
"ಲೇಶತಃ" ಎಂಬುವ ಪದವನ್ನು ಬರೆದು

ಪಠಿಸಿದರು ಮಧ್ವರು ಭಾಷ್ಯವನ್ನು ಮತ್ತೆ

ಶಿಷ್ಯರೆಲ್ಲರೂ ಅಂದು ರಾತ್ರಿಯಲ್ಲಿ ನಿದ್ರಿಸಲು

ಶ್ರೀ ಹರಿಯು ಭೂಮಿಯನ್ನು ಬಡಿದು ಸದ್ದನು ಮಾಡಿ

"ಮತ್ತೊಮ್ಮೆ ಪಠಿಸೆಂದು" ಆದೇಶವಿತ್ತನು

ಎಚ್ಚೆತ್ತರಾ ಶಿಷ್ಯರೀ ದನಿಯ ಕೇಳಿ
 
॥ ೪೧ ॥
 
ಪರಮ ಪುರುಷನು ಹರಿಯು ಪ್ರತಿಮೆಯಲಿ ಸನ್ನಿಹಿತ

"ಉಚ್ಯತಾಂ " ಶಬ್ದವನು ಹರಿಯು ನುಡಿದುದ ಕೇಳಿ

ಅದರ ಭಾವವನವರು ಸಾವಧಾನದಿ ಗ್ರಹಿಸಿ

ಶಿಷ್ಯರೆಲ್ಲರ ಕರೆದು ಆನಂದ ತೀರ್ಥರು

ಪ್ರವಚನವ ಮಾಡಿದರು ಗ್ರಂಥವನು ಮತ್ತೊಮ್ಮೆ

ಪರಮಾತ್ಮನಿದರಿಂದ ಸುಪ್ರೀತನಾದ
 
॥ ೪೨ ॥
 
ಅಲಕನಂದಾ ಸ್ನಾನದ ವೈಖರಿ
 

 
ಅಲಕನಂದೆಗೆ ಹೆಸರು ಶೈತ್ಯಗಂಗೆ ಎಂದು

ಆ ಪುಣ್ಯತೀರ್ಥದ ನೀರು ಅತಿ ಶೀತವಹುದು

ಸ್ಪರ್ಶಿಸಲೂ ಅಂಜುವರು ಮಂದಿ ಅದನು

ಅರುಣ ಕಾಲದಲೆದ್ದು ಆನಂದ ತೀರ್ಥರು

ಮೀಯುವರು ಪ್ರತಿನಿತ್ಯ ಆತಂಕವಿರದೆ

ಎಷ್ಟಾದರೂ ಅವರು ಪವಮಾನ ಸುತರು
 
ಆರನೆಯ ಸರ್ಗ / 99
 
40
 
41
 
42
 
43
 
॥ ೪೩ ॥