This page has not been fully proofread.

ವಾಸುದೇವನ ಪದದಿ ಸತತ ಸಂಗವ ಪೊಂದಿ
ಸ್ವಂತ ಸಾಮರ್ಥ್ಯದಲ್ಲಿ ರುದ್ರದೇವನ ಮೆಟ್ಟಿ
 
ಪಾಪನಾಶಕವಾದ ಕೀರ್ತಿಯನ್ನು ಪಡೆದಿರುವ
ಆಚಾರ್ಯ ಮಧ್ವರು ಯಾತ್ರೆಯನ್ನು ಮುಂದರಿಸಿ
ಗಂಗಾಪ್ರವಾಹವನು ಕೆಚ್ಚಿನಿಂದಲಿ ಹಾಯ್ದು
ಬದರಿಕಾಶ್ರಮದೆಡೆಗೆ ಮುನ್ನಡೆದು ಹೋದರು
 
ಹಾದಿಯಲ್ಲಿ ಅಡಿಗಡಿಗೆ ಆನಂದ ತೀರ್ಥರು
ಸ್ಮರಣ ಮಾತ್ರದಿ ಮನಕೆ ಆನಂದ ವೀಯುವ
ಮೂರು ಜಗಗಳಿಗೂ ವಿಸ್ಮಯವ ನೀಡುವ
ಪರಿ ಪರಿಯ ಕಾರ್ಯವನ್ನು ಸುಲಭದಲ್ಲಿ ಮಾಡುತ್ತ
ಶ್ರೀ ಹರಿಯು ನರರಿಗೆ ಗೋಚರಿಪ ಕ್ಷೇತ್ರವದು
ಬದರಿಕಾಶ್ರಮದ ಬಳಿ ಬಂದು ಸೇರಿದರು
 
ವೇದವ್ಯಾಸಾನುಗ್ರಹ
 
ಭಾರತಕೆ ಭೂಷಣ ಬದರಿನಾರಾಯಣ
ಅನಂತ ಗುಣಪೂರ್ಣ, ಸರ್ವೋತ್ತಮ
ಸ್ವಾಮಿಯ ಚರಣಕ್ಕೆ ಭಕುತಿಯಲಿ ನಮಿಸುತ್ತ
ಅಡಿಗಡಿಗೆ ಆತನ ಕರುಣೆಯನು ಬೇಡುತ್ತ
ಭಕ್ತಿಯಲಿ ರಚಿಸಿದಾ ಹರಿಗೀತೆ ಭಾಷ್ಯವನ್ನು
ಅರ್ಪಿಸಿದರಾತನಾ ಚರಣಾರವಿಂದದಲಿ
 
ಸಂಗಡಿಗರೆಲ್ಲರನು ದೂರಕ್ಕೆ ಕಳುಹಿ
ಏಕಾಂತದಲ್ಲವರು ಸ್ವಾಮಿ ಸನ್ನಿಧಿ ಸೇರಿ
ಅಂತರಂಗದ ಸೇವೆ ಸಲ್ಲಿಸುತಲವರು
ಬದರಿನಾರಾಯಣನ ಪ್ರೀತ್ಯರ್ಥವಾಗಿ
ಹರಿಗೀತೆ ಭಾಷ್ಯವನ್ನು ಪಠಿಸತೊಡಗಿದರು.
"ಶಕ್ತಿ ಇದ್ದಷ್ಟರ್ಥ ಹೇಳುವೆನು" ಎಂದರು
 
98/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39