This page has not been fully proofread.

ಗೀತಾ ಭಾಷ್ಯ ರಚನೆ
ಯಾತ್ರೆಯನ್ನು ಕೈಗೊಂಡ ಸಜ್ಜನನು ಒಬ್ಬ
ತನ್ನೆಲ್ಲ ಬಂಧುಗಳ ಸನಿಹಕ್ಕೆ ಕರೆದು
ಉತ್ಕೃಷ್ಟ ಧನರಾಶಿ ಹಂಚಿ ತೆರಳುವ ತೆರದಿ
ಶ್ರೇಷ್ಠತಮ ಹರಿಗೀತೆ ಭಾಷ್ಯವೊಂದನು ರಚಿಸಿ
ಅಚ್ಯುತ ಪ್ರೇಕ್ಷರಿಗೂ ಜೇಷ್ಠಯತಿಗಳಿಗೂ
 
ಪರಮ ಭಕುತಿಯಲದನು ಅರ್ಪಿಸಿದರು
 
ಪ್ರಥಮ ಬದರೀ ಯಾತ್ರ
 
ಶ್ರೀ ಹರಿಯ ಸೇವೆಯನು ಸಾಧಿಸುವ ಸಲುವಾಗಿ
ಬದರಿಕಾಶ್ರಮದತ್ತ ಪಯಣಿಸುವ ಆಸೆಯಲಿ
ಸ್ವಾಮಿ ಪುರುಷೋತ್ತಮರ ಅನುಮತಿಯ ಬೇಡಿದರು
ಆನಂದ ತೀರ್ಥರ ಮನದಭೀಷ್ಟವ ಕಂಡು
ಶ್ರೀ ಹರಿಯ ರಕ್ಷಣೆಯು ಸರ್ವದಾ ಇರಲೆಂದು
ಅನುಮತಿಯನಿತ್ತರು ಪೂಜ್ಯ ಗುರುವರ್ಯರು
 
ಮಲಯ ಮಂಡಲದಿಂದ ಭರದಿಂದ ಬರುವಂಥ
ಭ್ರಮರಗಳ ಹಿಂಡುಗಳ ಹಿಂದೆಯೇ ಇರುವಂಥ
ಪರಮ ಪರಿಶುದ್ಧತೆಯ ವಾಯುವಿನ ತೆರದಲ್ಲಿ
ಸಾಧು ಪಾಂಥರ ತಾಪ ಪರಿಹರಿಸಲೆಂಬಂತೆ
ಯೋಗ್ಯ ಹಿಂಬಾಲಕರ ತಂಡದಿಂದೊಡಗೂಡಿ
ಬಡಗ ನಾಡಿನ ಕಡೆಗೆ ಒಡನೆ ತೆರಳಿದರು
 
ಗಂಗಾದಿ ತೀರ್ಥಗಳು, ಭಾಗವತ ಶಾಸ್ತ್ರಗಳು
ಪಾಪ ಪರಿಹರಿಸುವ ಎರಡು ವಿಧ ಸಾಧನವು
ಬುದ್ಧಿ ಶುದ್ಧಿಯ ಕೊಡುವ ಭಾಗವತ ಬೋಧಿಸುತ
ಗಂಗಾದಿ ನದಿಗಳಲ್ಲಿ ಸ್ನಾನವನ್ನು ಮಾಡುತ್ತ
ಎರಡು ವಿಧ ಸಾಧನವ ಪರಿಶುದ್ಧಗೊಳಿಸುತ್ತ
ಮುಂದಕ್ಕೆ ನಡೆದರು ಆನಂದ ತೀರ್ಥರು
 
ಆರನೆಯ ಸರ್ಗ / 97
 
32
 
33
 
34
 
35