This page has been fully proofread once and needs a second look.

ಕಲಿಯುಗದ ಕಾಲದಲ್ಲಿ ಕಲಿಯ ಪ್ರಭಾವ

ಅದರಿಂದ ಮಾನವರು ದುರ್ಮಾರ್ಗ ನಿರತರು
 

ಸಜ್ಜನರು ಸಂಖ್ಯೆಯಲ್ಲಿ ಬಹು ಅಲ್ಪ ಮಂದಿ

ಇವರಿಂದ ದೌದ್ರೌಪದಿಯು ನಿರ್ಲಕ್ಷ್ಯಳಾದವಳು

ಉಳಿದಿಷ್ಟು ಸಾತ್ವಿಕರು ಈ ಮಹಾಸತಿಯನ್ನು

ಕಂಡು ಮರುಗಿದರಲ್ಲಿ ನಿಸ್ಸಹಾಯಕರಾಗಿ
 
॥ ೨೮ ॥
 
ಶ್ರೀ ಹರಿಯು ಭಿನ್ನನು ಎಲ್ಲ ಜೀವಿಗಳಿಂದ

ಪೂರ್ಣ ಸದ್ಗುಣನಿವನು, ದೋಷ ದೂರನು, ಅಜನು

ಶ್ರೀ ಹರಿಯನನವರತ ಅತಿ ಭಕುತಿಯಿಂದ
ದೌ

ದ್ರೌ
ಪದಿಯು ಧರಿಸಿಹಳು ಹೃದಯ ಮಂದಿರದಲ್ಲಿ

"ಅವನೀಧರ, ವಾಸುದೇವ, ಓ, ಸ್ವಾಮಿ, ನಾಥ!"

ಎಂದೆನುತ ಅಡಿಗಡಿಗೆ ಪ್ರಾರ್ಥಿಸಿದಳಾ ಸಾಧಿ
 
ಧ್ವಿ ॥ ೨೯ ॥
 
ಶ್ರೀ ಕೃಷ್ಣ ದ್ವಯರಿಂದ ದೌದ್ರೌಪದಿಯು ರಕ್ಷಿತಳು

ಬೇರಾರಿಗೂ ಆಕೆ ಶರಣು ಎಂಬುವುದಿಲ್ಲ

ಎಂದೆಂದೂ ಶ್ರೀ ಹರಿಗೆ ಮೊರೆಯನಿಡುವಳು ಅವಳು

ಆಕೆಯಾ ಸಂಕಟದ ಕ್ಷಣ ಕಂಡ ಸಜ್ಜನರು

"ಹಾ, ಹಾ," ಎಂದೆನುತ "ಇದು ಧರ್ಮವಲ್ಲ"

ನಾವೆಲ್ಲ ಇದನೀಗ ಖಂಡಿಸುವೆವೆಂದರು
 
॥ ೩೦ ॥
 
ವೇದಿ ಮಧ್ಯದಿ ಜನಿಸಿ ಅವತಾರ ತಾಳಿದ
ದೌ

ದ್ರೌ
ಪದಿಯ ಬವಣೆಯನ್ನು ಕಂಡು ಕನಲಿದ ಭೀಮ.
 

ಅಂತೆಯೇ ಕರುಣಾಬ್ಧಿ ಆನಂದ ತೀರ್ಥರು

ವೇದಗಳ ದುಃಸ್ಥಿತಿಯ ಕಂಡು ಕೆರಳುತ್ತ
 

ದುಷ್ಟ ಪಕ್ಷದ ಜನರ ಕಂಡು ಕನಲುತ್ತ

ದಮನ ಮಾಡುವೆನೆಂದು ನಿರ್ಧಾರ ಮಾಡಿದರು
 
96 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31
 
॥ ೩೧ ॥