This page has been fully proofread once and needs a second look.

ಬ್ರಹ್ಮ ಸೂತ್ರ ಭಾಷ್ಯ ರಚನೆಯ ಸಂಕಲ್ಪ

 
ಯಾಜೋ<error>ಪಿ</error><fix>ಪ</fix>ಯಾಜರು ಭೂಸುರ ಶ್ರೇಷ್ಠರ

ಬುದ್ಧಿ ಸಮೃದ್ಧಿಯಿಂ ಪ್ರಕಟವಾದ ಶರೀರ
 

ಅವಯವಗಳಂತೂ ತುಂಬ ರಮಣೀಯ

ಬ್ರಹ್ಮ ಸೂತ್ರಗಳೆಂಬ ಹೊಳೆವ ಮಾಲೆಗಳಿಂದ

ಶೋಭಿತಳು ಈ ನಮ್ಮ ದೌದ್ರೌಪದೀ ದೇವಿ

ಭುವನ ಭೂಷಣಳವಳು, ತೈಲೋಕ್ಯ ವಂದಿತಳು
 
॥ ೨೪ ॥
 
ಕಂಗೊಳಿಪ ಚರಣಗಳ ಸುಂದರ ವಿಲಾಸ
 

ಪ್ರಕಟವಾಗಿಹ ಕೃಷ್ಣವರ್ಣ, ಗುಣಾಡ್ಯ
ಢ್ಯೆ
ಭಾರತೋತ್ತಮರಾದ ಪಾಂಡವರ ಪ್ರಿಯ ಪತ್ನಿ

ಅನುರೂಪ ವಸ್ತ್ರಗಳ ಧರಿಸಿಹಳು ಇವಳು

ಮೃದುಮಧುರ ಸ್ವರದಿಂದ ಶೋಭಿತಳು ಇವಳು

ಪರಮ ಪಾವನೆ ಈಕೆ, ದೌದ್ರೌಪದೀ ದೇವಿ
 
॥ ೨೫ ॥
 
ರಾಜಸೂಯವು ಒಂದು ಅತಿ ಶ್ರೇಷ್ಠ ಯಾಗ

ಇಂತಹ ಹಲವಾರು ಯಾಗದಲ್ಲಿ ಪಾಲ್ಗೊಂಡು

ವಾಸುದೇವನ ಗುಣದ ನಿಷ್ಠೆಯನ್ನು ಹೊಂದಿದ

ಸಕಲ ಧರ್ಮಗಳನ್ನೂ ಬೋಧಿಸುವ ಸಾಮರ್ಥ್ಯ !

ಸಕಲ ಶಾಸ್ತ್ರಗಳಲ್ಲೂ ಪಡೆದಿರುವ ನೈಪುಣ್ಯ !

ಜನನಿಯ ತೆರದಲ್ಲಿ ಸರ್ವಜನ ಪೂಜಿತಳು
 
॥ ೨೬ ॥
 
ಸದ್ಧರ್ಮ ಪಥವನ್ನು ತೊರೆದ ದುಶ್ಯಾಸನ

ದುರುಳ, ದುಷ್ಕರ್ಮಿ, ದುರ್ಬುದ್ಧಿ, ದುಷ್ಟ

ಸಾಮ್ರಾಜ್ಯ ಪದವಿಗೆ ಹಾತೊರೆದ ದುರುಳ

ಇಂಥ ದುರ್ಜನನಿಂದ ಉಪಟಳವ ಸಹಿಸಿದಳು

ಕೇಶರಾಶಿಯ ಸೆಳೆತ ಅನುಭವಿಸಿದವಳು
 

ವಿವಿಧ ಪರಿಯಲಿ ನೊಂದ ಸಾಧ್ವಿ ಇವಳು
 
ಆರನೆಯ ಸರ್ಗ / 95
 
24
 
25
 
26
 
27
 
॥ ೨೭ ॥