This page has been fully proofread once and needs a second look.

ಶ್ರೀ ಪೂರ್ಣ ಪ್ರಜ್ಞರು ಸರ್ವಜ್ಞರು

 
ಆಚಾರ್ಯ ನುಡಿಗಳಿಗೆ ಪ್ರಾಮಾಣ್ಯ ಆಧಾರ

ಸಕಲ ಶೃತಿ ವಿದ್ಯೆಗಳ ಅದ್ಭುತ ಪರಿಜ್ಞಾನ

ಅನಾಗತಗತಿಗಳು ಸುಲಭದಲ್ಲಿ ಸಂವೇದ್ಯ

ಇಂತೆಲ್ಲ ಚಿಂತಿಸುತ ಆಚಾರ್ಯರ ಬಗೆಗೆ

ಆದರವ ತೋರಿದರು ಮಧ್ವ ಪ್ರಣಾಳಿಕೆಗೆ

ತ್ರಿಕಾಲ ಜ್ಞಾನಿಗಳು ಆನಂದ ತೀರ್ಥರು
 
॥ ೨೦ ॥
 
ದಕ್ಷಿಣ ದಿಗ್ವಿಜಯ ಪರಿಸಮಾಪ್ತ
 

 
ಅವರ ಅರಿವಿನ ಹರವು ವಿಸ್ತಾರವಹುದು

ಶೃತಿ ಇರಲಿ, ಸ್ಮೃತಿ ಇರಲಿ, ಇತಿಹಾಸವೇ ಇರಲಿ

ಎಲ್ಲ ಕ್ಷೇತ್ರಗಳಲ್ಲೂ ಪರಿಪೂರ್ಣ ಸುಜ್ಞಾನ

ಆಚಾರ್ಯ ಮಧ್ವರು "ಸರ್ವಜ್ಞ" ಮತಿಗಳು

ಎಲ್ಲೆಲ್ಲೂ ಬುಧಜನರು ಎಲ್ಲ ಸಭೆಗಳಲೂ

ಆನಂದ ತೀರ್ಥರನು ಮನಸಾರೆ ಮೆಚ್ಚಿದರು
 
॥ ೨೧ ॥
 
ಇಂತವರ ಕೀರ್ತಿ ಎಲ್ಲೆಲ್ಲೂ ಹರಡಿತು

ಲೋಕ ಪ್ರಸಿದ್ರು ಆನಂದ ತೀರ್ಥರು

ಸುಜನ ಕೈರವಗಳಿಗೆ ಆತ್ಮೀಯ ಬಂಧು

ಪೂರ್ಣ ಚಂದ್ರನ ಬೆಳಕು ಎಲ್ಲೆಲ್ಲೂ ಹರಿವಂತೆ

ಆಚಾರ್ಯ ಮಧ್ವರ ಕೀರ್ತಿಯ ಜ್ಯೋತ್ಸ್ನೆಯು
 

ಅವರಿನ್ನೂ
 
ಸೇರದಿಹ ದೇಶವನೂ ವ್ಯಾಪಿಸಿತು
 
॥ ೨೨ ॥
 
ರಮ್ಯ ರಮಣೀಯತೆಯ ದೇವ ಮಂದಿರ ನಿವಹ !

ಪರಮಾತ್ಮ ಶ್ರೀ ಹರಿಯ ದಿವ್ಯ ಸನ್ನಿಧಿಗಳು !

ಇಂದಿರಾ ರಮಣನನು ಎಡೆಬಿಡದೆ ನಮಿಸುತ್ತ

ಸುವಿಚಾರ ಕುಶಲಿಗಳು ಆನಂದ ತೀರ್ಥರು

ಭರದಿಂದ ಸಾಗುತ್ತ ಸಂಚಾರ ಪಥದಲ್ಲಿ

ರೂಪ್ಯ ಪೀಠದ ಒಡೆಯ ಹರಿ ಸನಿಹ ಸೇರಿದರು
 
94 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥