This page has been fully proofread once and needs a second look.

ಈ ಒಂದು ಪ್ರಕರಣದ ಪ್ರಭಾವ ಬಲದಿಂದ

ಆಚಾರ್ಯ ಮಧ್ವರ ಪೂರ್ಣ ಸುಜ್ಞಾನವನ್ನು
ನು
ಅರಿತರಾ ಪಂಡಿತರು ಸುಸ್ಪಷ್ಟವಾಗಿ

ರುದ್ರಾದಿ ದೇವಗಣ ಆದರದಿ ವಂದಿಸುವ

ಆನಂದ ತೀರ್ಥರಿಗೆ ಸಾಷ್ಟಾಂಗ ನಮಿಸುತ್ತ

ಧನ್ಯತಾ ಭಾವದಲಿ ಸಾರ್ಥಕ್ಯ ಪಡೆದರು
 
॥ ೧೬ ॥
 
ಅಪಾಲಾ ಶಬ್ದದ ಅಪೂರ್ವಾರ್ಥ
 

 
ಇಂತಿರಲು ಮತ್ತೊಂದು ಪಂಡಿತರ ಸಭೆಯಲ್ಲಿ

ಆ ಸುರೇಂದ್ರನು ಒಮ್ಮೆ <error>ಕನ್ಯ</error> <fix>ಕನ್ಯೆ</fix>ಯೋರ್ವಳ ಮೆಚ್ಚಿ

ಕಾಂತಿಯುತ ದೇಹವನ್ನು ಕರುಣಿಸಿದ ಕಥೆಯನ್ನು

ಬಣ್ಣಿಸುವ ಸೂಕ್ತವನು ವಿವರಿಸುತ ಗುರುಗಳು

"ಅಪಾಲಾ" ಎಂಬುದಕೆ "ಅತಿ ತರುಣಿ" ಎಂದರ್ಥ

ಎಂದು ಹೇಳಿದರಲ್ಲಿ ಆಚಾರ್ಯ ಮಧ್ವರು
 
॥ ೧೭ ॥
 
"ಅಪಾಲಾ" ಪದದರ್ಥ "ಶ್ವಿತ್ರಿಣೀ' ಎನ್ನುತ್ತ

ಅಲ್ಲಿದ್ದ ಪಂಡಿತರು ಆಕ್ಷೇಪವೆತ್ತಿದರು

ತೃಣ ಮಾತ್ರ ಜಗ್ಗದೆ ಆನಂದ ತೀರ್ಥರು

"ಶೀಘ್ರದಲಿ ಬರಲಿಹನು ಪಂಡಿತನು ಒಬ್ಬ

ನೀಗುವನು ನಿಮ್ಮ ಈ ಸಂಶಯವನವನು"

ಎನ್ನುತ್ತ ಅವರು, ಮುಂದಕ್ಕೆ ತೆರಳಿದರು
 
॥ ೧೮ ॥
 
ಅತಿ ಶೀಘ್ರದಲ್ಲಿಯೇ ಬಂದನಾ ವಿದ್ವಾಂಸ

ಆನಂದ ತೀರ್ಥರಾ ನುಡಿಗೆ ಅನುಗುಣವಾಗಿ

ಎಲ್ಲ ಲಕ್ಷಣವನ್ನೂ ಹೊಂದಿದ್ದನಾತ

ಅವನನ್ನು ಬರಮಾಡಿ ಪೀಠದಲ್ಲಿ ಲಿಕುಳ್ಳಿರಿಸಿ

"ಅಪಾಲಾ " ಎಂಬುದಕ್ಕೆ ಅರ್ಥವನ್ನು ಕೇಳಲು

"ಅತಿ ತರುಣಿ" ಎಂದೇ ಆತನೂ ನುಡಿದನು
 
ಆರನಯ ಸರ್ಗ / 93
 
16
 
17
 
18
 
19
 
॥ ೧೯ ॥