This page has been fully proofread once and needs a second look.

"ಇಂದು ಈ ಸಭೆಯಲ್ಲಿ ಮಂಡಿಸಿಹ ಮಧ್ವರು

ಅಪ್ರತಿಮ ಪಾಂಡಿತ್ಯ, ಸುಜ್ಞಾನ ವುಳ್ಳವರು

ತರ್ಕ, ಮೀಮಾಂಸೆಯಲಿ ವೇದಾದಿ ವಿದ್ಯೆಯಲಿ

ನಿಪುಣರಾಗಿಹರನ್ನು ಖಂಡಿಸಿದ ಖ್ಯಾತರು

ಅಂಥ ಸುಜ್ಞಾನಿಗೆ ಸರಿಸಾಟಿಯೆ ನಾವು ?"
 

ಒಳಗೊಳಗೆ ತೊಳಲಿದರು ಕೇರಳದ ಪಂಡಿತರು
 
॥ ೧೨ ॥
 
ಇಂತೆಂದು ಚಿಂತಿಸಿದ ದ್ವಿಜವರ್ಯರೆಲ್ಲ

ಅನ್ಯದೇಶದ ಒಬ್ಬ ಪಂಡಿತನ ಮುಂದಿರಿಸಿ

ಆಚಾರ್ಯರೊಂದಿಗೆ ಸೆಣಸಲೆಳಸಿದರು

"ಸತ್ಪಾತ್ರ ದಾನವನು ನೀಡುವನ ಹೊಗಳುವ
"
ವೇದ ಸೂಕ್ತದ ಅರ್ಥ ವಿವರಿಸಿರಿ ಎಂದು

ಆಚಾರ್ಯ ಮಧ್ವರಲಿ ಮನವಿ ಮಾಡಿದರು
 
॥ ೧೩ ॥
 
ದಾನಸೂಕ್ತದ ಮಂತ್ರ ವಿವರಿಸುತ ಮಧ್ವರು

"ಪೃಣೀಯಾತ್' ಶಬ್ದಕ್ಕೆ ಪ್ಪಪೃಣ್ ಮೂಲವೆಂದರು

ಮಧ್ವ ಅಪಜಯವನ್ನೇ ಆಶಿಸಿದ ಪಂಡಿತ

ಈಗೊಂದು ಅವಕಾಶ ಲಭಿಸಿತೆಂದ
 

ಮಧ್ವರ ಮಾತಿನಲಿ ಹುರುಳಿಲ್ಲವೆಂದಂದು

"ಪೃಣೀಯಾತ್" ಶಬ್ದಕ್ಕೆ "ಪ್ರೀಜ್" ಧಾತು ಸರಿಯೆಂದ
 
॥ ೧೪ ॥
 
ಮರುಗಿದರು ಮಧ್ರು ಪಂಡಿತನ ಮೌಡ್ಢ್ಯಕ್ಕೆ

"ಪ್ರ" ಧಾತುಗಳ ಭೇದವೇ ಗೊತ್ತಿಲ್ಲ

ವ್ಯಾಕರಣ ಪ್ರಾಥಮಿಕ ಶಿಕ್ಷಣವೇ ನಿನಗಿಲ್ಲ

ಮೂಢ ! ಅಕ್ಷರವ ಬರೆಬರೆದು ಅಭ್ಯಾಸ ಮಾಡಿಕೊ"

ಇಂತೆಂದು ಗದರಿಸುತ ಆನಂದ ತೀರ್ಥರು
 

ಮತ್ಸರಾಕುಲಿತರನು ಅಪಹಾಸ್ಯ ಮಾಡಿದರು
 
92 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥