This page has not been fully proofread.

"ನಾವು ಹೇಳಿದ ಅರ್ಥ ಶಾಸ್ತ್ರಸಮ್ಮತವಹುದು
ಅಂತೆಯೇ ಆಗಿಹುದು ನಿಮ್ಮ ಅರ್ಥವು ಕೂಡ
ಮೂರು ಅರ್ಥವು ಉಂಟು ವೇದಾದಿಗಳಿಗೆ
ವ್ಯಾಸ ಭಾರತಕುಂಟು ಹತ್ತು ಅರ್ಥಗಳು
ಹರಿಯ ಸಾಸಿರ ನಾಮ ನೂರರ್ಥ ಪಡೆದಿಹುದು
ಇಂತೆಂದು ವ್ಯಾಖ್ಯಾನ ಮಾಡಿದರು ಗುರುಗಳು
 
ಆನಂದ ತೀರ್ಥರ ವಾದ ವೈಖರಿ ಕೇಳಿ
ಉಲ್ಲಸಿತರಾದರು ಎಲ್ಲ ವಿಪ್ರೋತ್ತಮರು
ಆಚಾರ್ಯ ಮಧ್ವರನು ವಾದದಲಿ ಸೋಲಿಸುವ
ಬಯಕೆಯನ್ನು ಹೊಂದಿದ್ದ ಪಂಡಿತರು ಎಲ್ಲ
ಮೊಗದಲ್ಲಿ ನಗೆಯನ್ನು ಸೂಸುತ್ತ ಕೇಳಿದರು
"ಅರ್ಥಶತಕವ ಹೇಳಿ, ಹರಿನಾಮ ಸಾಸಿರಕೆ
 
ಆನಂದ ತೀರ್ಥರು ನಿಯಮವನು ವಿಧಿಸಿದರು
"ನೂರು ಅರ್ಥವ ನಾನು ಈಗಲೇ ಹೇಳುವೆನು
ಅದರ ಅನುವಾದವನು ನೀವೀಗಲೇ ಕೊಡಬೇಕು
ಇದು ನನ್ನ ಕಟ್ಟು; ಒಪ್ಪಿಗೆಯೆ ? ಹೇಳಿ'
ಒಪ್ಪಿಕೊಂಡರು ಎಲ್ಲ ಪಂಡಿತರೂ ನಿಯಮಕ್ಕೆ
ಕಾರ್ಯದಲ್ಲಿ ತೊಡಗಿದರು ದೃಢವಾದ ಯತ್ನದಲ್ಲಿ
 
L
 
"ವಿಶ್ವ" ದಿಂದಾರಂಭ ಹರಿಯ ಸಾಸಿರ ನಾಮ
ಈ ಹೆಸರು ಪ್ರಖ್ಯಾತ ಉಪನಿಷತ್ತುಗಳಲ್ಲಿ
ಪ್ರಕೃತಿ, ಪ್ರತ್ಯಯದ ಸಂಗಮದ ರೀತಿಯನು
ವ್ಯಾಕರಣ ಶಾಸ್ತ್ರದ ವಿಹಿತ ನಿಯಮದ ಸಹಿತ
"ವಿಶ್ವ"ಶಬ್ದದ ಅರ್ಥ ನೂರನ್ನು ಬಿಡಿಸಿದರು
ಇಂಥ ಚತುರರು ನಮ್ಮ ಆನಂದ ತೀರ್ಥರು
 
90 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7