This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮಃ
 

 
ಆರನೆಯ ಸರ್ಗ
 

 
ಸಭೆಯೊಂದರಲ್ಲಿ ಐತರೇಯ ಕಥನ
 

 
ಸಭೆಯಲ್ಲಿ ಕುಳಿತಿದ್ದ ಹಿರಿಯ ಪಂಡಿತನೊಬ್ಬ

ಆನಂದ ತೀರ್ಥರನು ಕುರಿತು ಇಂತೆಂದ:

"ಐತರೇಯದ ಸೂಕ್ತ ತಮ್ಮ ಮುಂದಿರಿಸುವೆನು

ಈ ಸೂಕ್ತ ದರ್ಥವನು ಸರಿಯಾಗಿ ಅರಿಯಲು

ತವಕದಲಿ ಕಾದಿಹುದು ನಮ್ಮ ಪಂಡಿತ ಸಭೆಯು

ಪೂಜ್ಯರಿದ ದಯಮಾಡಿ ಕೃಶೃತ ಪಡಿಸಬೇಕು"
 
॥ ೧ ॥
 
ದಶಪ್ರಮತಿಗಳಿಂದ ವಿಷ್ಣು ಸಹಸ್ರನಾಮದ ಶತಾರ್ಥ ಕಥನ
 

 
ಮೇಘ ಸದೃಶವಾದ ಗಂಭೀರ ದನಿಯಲ್ಲಿ

ಸಭೆಯತ್ತ ಮೊಗಮಾಡಿ ಹೇಳತೊಡಗಿದರು

ವರ್ಣಗಳ ಸ್ಪಷ್ಟತೆ, ಮತ್ತದರ ಹಿರಿಮೆ

ಅನುರೂಪ ಮಾತ್ರೆಗಳ ಉಚಿತ ಉಚ್ಚಾರಣೆ

ಮತ್ತಿತರ ವ್ಯಾಕರಣ ಲಕ್ಷಣಗಳೊಂದಿಗೆ

ಸೂಕ್ತದ ಅರ್ಥವನು ಸರಳಗೊಳಿಸಿದರು
 
॥ ೨ ॥
 
"ಮಂತ್ರದುಚ್ಚಾರಣೆಯು ಅತಿ ಸುಲಭ ಇವರಿಗೆ

ವಿಹಿತ ಲಕ್ಷಣವೆಲ್ಲ ಕರತಲಾಮಲಕ
 

ದೇವತಾಗುರುಗಳಿಗೆ ಇವರು ಸಮನಾಗಿಹರು ''
 

ಇಂತು ಮನದಲ್ಲಿಯೇ ಆದರಿಸಿ ಪಂಡಿತರು

"ಸೂಕ್ತಕ್ಕೆ ಬೇರೊಂದು ಅರ್ಥವೂ ಇಹುದು

ನೀವು ಹೇಳಿದ ಅರ್ಥ ಸರಿಯಲ್ಲ" ಎಂದರು
 
1
 
2
 
3
 
ವೆಂದರು ॥ ೩ ॥